ಕರ್ನಾಟಕದಲ್ಲಿ 8 ಲಕ್ಷ ದಾಟಿದ ಕೊವಿಡ್-19 ಪ್ರಕರಣಗಳ ಸಂಖ್ಯೆ

ಬೆಂಗಳೂರು, ಅಕ್ಟೋಬರ್.25: ಕರ್ನಾಟಕದಲ್ಲಿ ಹೊಸ ಕೊವಿಡ್-19 ಸೋಂಕಿತರಿಗಿಂತ ಎರಡೂವರೆ ಪಟ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 4439 ಮಂದಿಗೆ ಕೊರೊನಾವೈರಸ್ ಸೋಂಕು ತಗುಗಿಲ್ಲಿದ್ದರೆ, 10106 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಕಡಿಮೆಯಾಗಿದೆ. ಒಂದು ದಿನದಲ್ಲಿ 32 ಜನರು ಮಹಾಮಾರಿಗೆ ಬಲಿಯಾಗಿದ್ದರೆ, ಸಾವಿನ ಸಂಖ್ಯೆ 10905ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಕೊರೊನಾವೈರಸ್ ಒಟ್ಟು 802818 ಸೋಂಕಿತ ಪ್ರಕರಣಗಳ ಪೈಕಿ 710843 ಸೋಂಕಿತರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ 81050 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.

4439 New Coronavirus Cases Reported in Karnataka Today, State Tally Rise to 802818


ಎಷ್ಟು ಮಂದಿಗೆ ಕೊವಿಡ್-19 ಪರೀಕ್ಷೆ?:

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 17729 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 82782 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 100511 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 73,81,601 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಜಿಲ್ಲೆವಾರು ಕೊವಿಡ್-19 ಕೇಸ್?:

ರಾಜ್ಯದಲ್ಲಿ ಒಟ್ಟು 4439 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 41, ಬಳ್ಳಾರಿ 132, ಬೆಳಗಾವಿ46, ಬೆಂಗಳೂರು ಗ್ರಾಮಾಂತರ 234, ಬೆಂಗಳೂರು 2468, ಬೀದರ್ 7, ಚಾಮರಾಜನಗರ 22, ಚಿಕ್ಕಬಳ್ಳಾಪುರ 50, ಚಿಕ್ಕಮಗಳೂರು 36, ಚಿತ್ರದುರ್ಗ 99, ದಕ್ಷಿಣ ಕನ್ನಡ 139, ದಾವಣಗೆರೆ 72, ಧಾರವಾಡ 65, ಗದಗ 22, ಹಾಸನ 103, ಹಾವೇರಿ 9, ಕಲಬುರಗಿ 62, ಕೊಡಗು 35, ಕೋಲಾರ 49, ಕೊಪ್ಪಳ 52, ಮಂಡ್ಯ 86, ಮೈಸೂರು 140, ರಾಯಚೂರು 30, ರಾಮನಗರ 23, ಶಿವಮೊಗ್ಗ 32, ತುಮಕೂರು 141, ಉಡುಪಿ 117, ಉತ್ತರ ಕನ್ನಡ 46, ವಿಜಯಪುರ 49, ಯಾದಗಿರಿ 32, ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+