44 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು ನಿಗಮ ಮಂಡಳಿ ಸ್ಥಾನ
ಬೆಂಗಳೂರು ಫೆಬ್ರವರಿ 29: ಕಾಂಗ್ರೆಸ್ ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ಗುರುವಾರ ಅಂದರೆ ಇಂದು ಆಯಾ ಇಲಾಖೆಗಳಿಂದ ನೇಮಕ ರವಾನೆಯಾಗಲಿದೆ.
44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಈ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆಯಾಗಿದೆ. ಇಂದು ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ ಎಮದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

ಜನವರಿ 26 ರಂದೇ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆಗಲೇ 34 ಮಂದಿ ಕಾರ್ಯಕರ್ತರ ಪಟ್ಟಿಯನ್ನೂ ಹೈಕಮಾಂಡ್ ರವಾನಿಸಿತ್ತು. ಈವರೆಗೆ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೇಮಕ ಮಾಡುವ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ 34 ಕಾರ್ಯಕರ್ತರ ಜೊತೆಗೆ ಹೆಚ್ಚುವರಿ 10 ಮಂದಿ ಸೇರಿಸಿ 44 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಸಿದ್ದರಾಮಯ್ಯ ಅವರ ಆಪ್ರತಾದ ಕೆ. ಮರಿಗೌಡ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ), ಸರೋವರ ಶ್ರೀನಿವಾಸ್(ಪ್ರವಾಸೋದ್ಯಮ ಅಭಿವೃದ್ಧಿನಿಗಮ), ವಿನೋದ್ ಅಸೂಟಿ(ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ), ಆಲ್ತಾಫ್(ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ), ಕಾಂತಾ ನಾಯಕ್ (ಕೌಶಲ್ಯ ಅಭಿವೃದ್ಧಿ ನಿಗಮ), ನಾಗಲಕ್ಷ್ಮಿ ಚೌಧರಿ(ಮಹಿಳಾ ಆಯೋಗ), ಮಾಜಿ ಜಿಲ್ಲಾಧ್ಯಕ್ಷರಾದ ಜೆ.ಎಸ್ ಆಂಜನೇಯಲು(ಬಳ್ಳಾರಿ ನಗಾರಾಭಿವೃದ್ಧಿ ಪ್ರಾಧಿಕಾರ)ಹಿರಿಯ ನಾಯಕ ಎಸ್.ಇ.ಸುದೀಂಧ್ರ, ಎಸ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್, ಮಾಜಿ ಮೇಯರ್ ಗಳಾದ ಸಂಪತ್‌ರಾಜ್ ಹಾಗೂ ಪದ್ಮಾವತಿ, ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರಿದ್ದ ತೀರ್ಥ ಹಳ್ಳಿಯ ಆರ್.ಎಂ. ಮಂಜುನಾಥ್‌ಗೌಡ, ಯುವನಾಯಕ ಎಸ್.ಮನೋಹರ್, ಎಚ್.ಎನ್.ಸುಂದರ್‌ಗೆ ಸ್ಥಾನ ಲಭಿಸಿದೆ.
ಪ್ರಮುಖರ ಪಟ್ಟಿ ಇಂತಿದೆ:-
1. ವಿನೋದ್ ಅಸೂಟಿ, ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
2. ಸರೋವರ ಶ್ರೀನಿವಾಸ್, ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
3. ಅಲ್ತಾಫ್, ಅಧ್ಯಕ್ಷ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
4. ಕಾಂತಾ ನಾಯಕ್, ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
5. ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷ, ಮಹಿಳಾ ಆಯೋಗ
6. ಆಂಜನೇಯಲು ಅಧ್ಯಕ್ಷ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
7. ಪಲ್ಲವಿ, ಸಾಂಬಾರು ಮಂಡಳಿ
8. ಆರ್.ಎಂ. ಮಂಜುನಾಥ ಗೌಡ, ಮಲೆನಾಡು ಅಭಿವೃದ್ಧಿ ಮಂಡಳಿ
9. ಸಂದರೇಶ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
10. ಮರಿಗೌಡ, ಅಧ್ಯಕ್ಷ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
11. ಮಂಡ್ಯ ಡಾ.ಹೆಚ್ ಕೃಷ್ಣ, ಆಗಾರ ನಿಗಮ
12. ಮುಂಡರಗಿ ನಾಗರಾಜ್
13. ಬಿ.ಹೆಚ್.ಹರೀಶ್
14. ಡಾ.ಅಂಶುಮಂಥ್
15.ರಘುನಾಂದನ್ ರಾಮಣ್ಣ
16.ಡಾ.ಬಿ ಯೋಗೇಶ್ ಬಾಬು
17. ಡಾ.ಎಚ್. ಕೃಷ್ಣ
18. ದೇವಿಂದ್ರಪ್ಪ ವರ್ತೂರು
19.ರಾಜಶೇಖರ್ ರಾಮಸ್ವಾಮಿ
20.ಎಸ್.ರಾಮಪ್ಪ
21.ಜಯಣ್ಣ
22.ಎಸ್.ಮನೋಹರ್
23.ಅಯೂಬ್ ಖಾನ್
24. ಮಮತಾ ಗುಟ್ಟಿ
25. ಸುಧೀಂದ್ರ
26. ಹೆಚ್.ಎಸ್. ಸುಂದರೇಶ್
27. ಸಂಪತ್ ರಾಜು
28. ಸವಿತ ರಘು
29.ಶಾಕಿರ್‌ಸನದಿ
30. ಸೋಮಣ್ಣ ಬೇವಿನಮರದ್
31.ಮಹಬೂಬ್ ಪಾಷ
32.ಕೀರ್ತಿ ಗಣೇಶ್
33. ಮಜರ್ಖಾನ್
34.ಲಲಿತ್ ರಾಘವ್
35.ಜಿ.ಎಸ್.ಮಂಜುನಾಥ್
36. ಜಗದೇವ ಗುತ್ತೆದಾರ
37.ರಮೇಶ್ ಬಾಬು
38. ಪದ್ಮಾವತಿ












Click it and Unblock the Notifications