Get Updates
Get notified of breaking news, exclusive insights, and must-see stories!

ಸುಮಲತಾ ಮುಂದೆ 4 ಪ್ರಶ್ನೆಗಳಿಟ್ಟ ಅಂಬರೀಶ್ ಅಭಿಮಾನಿಗಳು

ಬೆಂಗಳೂರು, ಮಾರ್ಚ್ 04 : ಸುಮಲತಾ ಅಂಬರೀಶ್‌ ಅವರು 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಮಂಡ್ಯ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದಾರೆ.

ಸುಮಲತಾ ಅಂಬರೀಶ್‌ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಬಗ್ಗೆಯೇ ಭಾರಿ ಚರ್ಚೆಗಳು ನಡೆಯುತ್ತಿವೆ. ಮಂಡ್ಯದಲ್ಲಿ ಅವರು ಕಣಕ್ಕಿಳಿದರೆ ಜೆಡಿಎಸ್ ಬೆಂಬಲ ಸಿಗುವುದು ಕಷ್ಟ. ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

'ಸುಮಲತಾ' ರವರಿಗೆ ಬಹಿರಂಗ ಪ್ರಶ್ನೆ ಎಂಬ ಫೇಸ್‌ಬುಕ್ ಪೋಸ್ಟ್‌ ಒಂದು ಸೋಮವಾರ ವೈರಲ್ ಆಗಿದೆ. ಅಂಬರೀಶ್ ಅಭಿಮಾನಿಗಳು/ಮಂಡ್ಯದ ಅಖಂಡ ಜನತೆಯ ಪರವಾಗಿ ಪ್ರಶ್ನೆಗಳು ಎಂಬ ಪೋಸ್ಟ್‌ ಎಲ್ಲೆಡೆ ಹರಿದಾಡುತ್ತಿದೆ.

ನಾಲ್ಕು ಪ್ರಶ್ನೆಗಳನ್ನು ಸುಮಲತಾ ಅಂಬರೀಶ್‌ ಅವರಿಗೆ ಕೇಳಲಾಗಿದೆ. ಎಲ್ಲಾ ಪ್ರಶ್ನೆಗಳು ಅವರ ರಾಜಕೀಯ ಪ್ರವೇಶ ಮತ್ತು ಮಂಡ್ಯದಿಂದ ಕಣಕ್ಕಿಳಿಯುವ ಕುರಿತಾಗಿವೆ. ಸುಮಲತಾ ಅಂಬರೀಶ್‌ ಅವರು ಈ ಪ್ರಶ್ನೆಗಳ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ. ಬಿಜೆಪಿ ನಾಯಕರು ಅವರನ್ನು ಪಕ್ಷಕ್ಕೆ ಕರೆತಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.

ಪ್ರಶ್ನೆ - 1

ಪ್ರಶ್ನೆ - 1

ಅಂಬರೀಶ್ ಅವರು ಇದ್ದಾಗ ನನ್ನ ಪತ್ನಿಯಾಗಲಿ ಅಥವ ನನ್ನ ಕುಟುಂಬಸ್ಥರು ಯಾರೇ ಆದರೂ ರಾಜಕೀಯಕ್ಕೆ ಬರುವುದಿಲ್ಲವೆಂದು ಹಲವಾರು ಬಾರಿ ಹೇಳಿಕೊಂಡಿದ್ದರು. ಅವರ ಮಾತಿಗೆ ಕಿಂಚಿತ್ತೂ ಬೆಲೆ ಕೊಡುವುದಿಲ್ಲವೇ ಸುಮಲತಾ ಅಕ್ಕಾ? ಎಂದು ಪ್ರಶ್ನಿಸಲಾಗಿದೆ.

ಪ್ರಶ್ನೆ - 2

ಪ್ರಶ್ನೆ - 2

ಕಳೆದ ಚುನಾವಣೆಯಲ್ಲಿ ಪ್ರಸ್ತುತ ರಾಜಕೀಯದಿಂದ ಬೇಸತ್ತು ಬಿ ಫಾರಂ ಮನೆ ಬಾಗಿಲಿಗೆ ಬಂದರೂ ಸಹ ಚುನಾವಣಾ ಕಣದಿಂದ ದೂರ ಸರಿದ ಅಂಬರೀಶ್ ರವರ ನಡೆ ಮರೆತೋಯ್ತಾ? ಸುಮಲತಾ ಅಕ್ಕಾ ಎಂದು ಪ್ರಶ್ನಿಸಲಾಗಿದೆ.

ಪ್ರಶ್ನೆ - 3

ಪ್ರಶ್ನೆ - 3

ಮಂಡ್ಯ ಜನತೆಯ ಋಣ ತೀರಿಸಲು ರಾಜಕೀಯಕ್ಕೆ ಬರಬೇಕಾ?. ಅಂಬರೀಶ್ ಅವರಿಗೆ ಬೇಡವಾದ ರಾಜಕೀಯ ನಿಮಗೇಕೆ?. ಅಂಬರೀಶ್ ಅವರ ಹೆಸರಿನಲ್ಲಿ ಸಂಸ್ಥೆ (ಎನ್‌ಜಿಓ) ಮಾಡಿ ಅದರಿಂದ ಮಂಡ್ಯ ಜನತೆಗೆ ಅನುಕೂಲ ಮಾಡಿಕೊಂಡು ಋಣ ತೀರಿಸಬಹುದಲ್ಲವೇ? ಸುಮಲತಾ ಅಕ್ಕಾ? ಎಂದು ಪ್ರಶ್ನಿಸಲಾಗಿದೆ.

ಪ್ರಶ್ನೆ - 4

ಪ್ರಶ್ನೆ - 4

ಅಂಬರೀಶ್ ಅವರು ನಿಧನರಾದಾಗ ಕುಮಾರಸ್ವಾಮಿ (ತಾವು ಮುಖ್ಯಮಂತ್ರಿ ಎನ್ನುವುದನ್ನು ಮರೆತು ಅಂಬರೀಶ್ ಅವರ ಸಾಮಾನ್ಯ ಅಭಿಮಾನಿಯಂತೆ) ಮಂಡ್ಯ ಜನತೆಗೆ ಕೊನೆಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ನೀವು ಮರೆತರೂ ಮಂಡ್ಯದ ಜನ ಮರೆಯುವುದಿಲ್ಲ ಸುಮಲತಾ ಅಕ್ಕ.

ಯಾರನ್ನು ಗೆಲ್ಲಿಸಬೇಕು

ಯಾರನ್ನು ಗೆಲ್ಲಿಸಬೇಕು

ಅಂಬರೀಶ್ ಅವರ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ಕಟ್ಟಲಾಗುತ್ತದೆ ಎಂದು ಘೋಷಿಸಿದ ಕುಮಾರಣ್ಣ ಅವರನ್ನು ಮಂಡ್ಯದ ಜನ ಗೆಲ್ಲಿಸಬೇಕೋ? ಅಥವ ಅಂಬಿ ಅಣ್ಣ ನಿಧನರಾಗಿ ತಿಂಗಳು ಕಳೆಯುವುದಕ್ಕೂ ಮುಂಚೆ ಅವರ ಅಗಲಿಕೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ನಿಮ್ಮನ್ನು ಗೆಲ್ಲಿಸಬೇಕೋ ನೇರವಾಗಿ ಹೇಳಿ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+