ತನ್ನದಲ್ಲದ ಬೈಕಿನಲ್ಲಿ 4 ಲಕ್ಷ ರೂ.ಇಟ್ಟ, ಕೊನೆಗೆ ಪೇಚಾಡಿದ
ಗದಗ, ಅಕ್ಟೋಬರ್, 15 : ಸ್ಥಳೀಯ ಕಾರ್ಪೋರೇಶನ್ ಬ್ಯಾಂಕ್ ಎದುರು ಮಂಗಳವಾರ 4 ಲಕ್ಷ ರೂ. ಕಳೆದುಕೊಂಡಿದ್ದ ವ್ಯಕ್ತಿಗೆ ಹಣವನ್ನು ಪುನಃ ನೀಡಿ ಪ್ರಾಮಾಣಿಕತೆ ಮೆರೆದ ಘಟನೆ ಗುರುವಾರನಡೆದಿದೆ. ಜಗದ್ಗುರು ತೋಂಟದಾರ್ಯ ಮಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ ಆರ್. ದಾನಪ್ಪಗೌಡ್ರ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಅಪರೂಪದ ವ್ಯಕ್ತಿ.
ಯಾವುದೋ ಕೆಲಸದ ನಿಮಿತ್ತಾ ಬೈಕಿನಲ್ಲಿ ಬ್ಯಾಂಕ್ ಗೆ ತೆರಳಿದ ಮಹೇಶ ಅಲ್ಲಿಂದ ತಮ್ಮ ಕೆಲಸ ಮುಗಿಸಿಕೊಂಡು ಮಠದ ಕಾರ್ಯಾಲಯಕ್ಕೆ ಬಂದರು. ಆಗ ಅವರಿಗೆ ತಮ್ಮ ಬೈಕಿನಲ್ಲಿ 4 ಲಕ್ಷ ರೂ.ಇರುವ ಬ್ಯಾಗ್ ಕಂಡು ಬಂದಿದೆ. ಆಗ ಆತ ಹಣ ಕಳೆದುಕೊಂಡ ಪಿ.ಆರ್.ಅರಳಿಕಟ್ಟಿ ಎಂಬಾತನನ್ನು ಹುಡುಕಿ ವಾಪಾಸ್ಸು ಮಾಡಿದ್ದಾನೆ.[ಗಾಡಿ ಪಂಚರ್ ಎಂದು ಕೆಳಕ್ಕೆ ಬಗ್ಗಿದರೆ 15 ಲಕ್ಷ ರೂ ಮಂಗಮಾಯ!]

ಜೀವವಿಮೆ ಏಜೆಂಟರಾದ ಪಿ.ಆರ್. ಅರಳಿಕಟ್ಟಿ ಹಣ ಕಳೆದುಕೊಂಡ ವ್ಯಕ್ತಿ. ಇವರು ಕಾರ್ಪೋರೇಶನ್ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ಬಂದಿದ್ದಾರೆ. ಬ್ಯಾಂಕ್ ಮುಂದೆ ನಿಂತಿದ್ದ ಇನ್ನೊಂದು ಬೈಕನ್ನು ತಮ್ಮದೆಂದು ಭಾವಿಸಿ ಮಹೇಶ್ ಎಂಬಾತನ ಬ್ಯಾಗಿನಲ್ಲಿ 4 ಲಕ್ಷ.ರೂ. ಇಟ್ಟಿದ್ದಾರೆ. ನಂತರ ಸ್ನೇಹಿತರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದು ಮನೆಗೆ ತೆರಳಿದ್ದಾರೆ.
ಬೈಕಿನಲ್ಲಿ ಹಣದ ಬ್ಯಾಗ್ ಇಲ್ಲದಿರುವುದನ್ನು ಗಮನಿಸಿದ ಅರಳಿಕಟ್ಟಿ ಆತಂಕಗೊಂಡು ಬ್ಯಾಂಕ್ ಬಳಿ ಬಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಮಹೇಶ್ ಎಂಬಾತ ಹಣ ದೊರಕಿರುವ ವಿಷಯ ಬ್ಯಾಂಕ್ ಬಳಿಯೊಂದರ ಪುಸ್ತಕ ಅಂಗಡಿ ಮಾಲೀಕನ ಬಳಿ ಹೇಳಿದ್ದರು. ಇದರಿಂದ ಸಮಾಧಾನಗೊಂಡ ಅರಳಿಕಟ್ಟಿ ತೋಂಟದಾರ್ಯ ಮಠಕ್ಕೆ ಹೋಗಿ ಅಲ್ಲಿ ಭದ್ರವಾಗಿದ್ದ ತಮ್ಮ ಹಣವನ್ನು ಮರಳಿ ಪಡೆದುಕೊಂಡು ಮಹೇಶ ಪ್ರಾಮಾಣಿಕತೆಯನ್ನು ಕೊಂಡಾಡಿದರು












Click it and Unblock the Notifications