ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಗ್ಗೆ 4 ಸಂಗತಿಗಳು
ಬೆಂಗಳೂರು, ಮೇ 18: ಸುದೀರ್ಘ ಚರ್ಚೆ, ಸಭೆಗಳ ನಂತರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು, ಡಿಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಈ ಬೆಳವಣಿಗೆ ಇಡೀ ರಾಜ್ಯವೇ ದೆಹಲಿಯತ್ತ ಮುಖ ಮಾಡುವಂತೆ ಮಾಡಿತ್ತು.
ಕರ್ನಾಟಕ ವಿಧಾನಸಭೆಗೆ ಮೇ 10 ನಡೆದ ಮತದಾನ ನಡೆದು ಮೇ 13ರಂದು ಫಲಿತಾಂಶ ಬಂದಿತ್ತು. ಈ ಬಾರಿ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವನ್ನು ಪಡೆದಿತ್ತು. ವಿಧಾನಸಭೆಗೆ ಸರ್ಕಾರ ರಚಿಸಲು ಬೇಕಾಗಿರುವ ಬಹುಮತದ ಸಂಖ್ಯೆ 113. ಹೀಗಾಗಿ ಇದನ್ನು ಮೀರಿ ಕಾಂಗ್ರೆಸ್ ಈ ಬಾರಿ ಬಹುಮತ ಪಡೆದಿತ್ತು. ಅಂದಿನಿಂದ ಯಾರು ಮುಖ್ಯಮಂತ್ರಿ ಎಂಬ ಚರ್ಚೆ ಜೋರಾಗಿತ್ತು. ಮೊದಲೇ ನಿರೀಕ್ಷಿಸಿದಂತೆ ಸಿದ್ದರಾಮಯ್ಯ ಅವರೇ ಸಿಎಂ ಎನ್ನಲಾಗಿತ್ತು.

ಈಗ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು 4 ಪ್ರಮುಖ ಸಂಗತಿಗಳನ್ನು ಗಮನಿಸಬೇಕಿದೆ.
1. 75 ವರ್ಷದ ಸಿದ್ದರಾಮಯ್ಯ ಅವರು ಡಿ ದೇವರಾಜ್ ಅರಸ್ (1972-1980) ನಂತರ ಪೂರ್ಣಾವಧಿಯ ಅಧಿಕಾರವನ್ನು ಪೂರ್ಣಗೊಳಿಸಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ. ದೇವರಾಜ್ ಅರಸ್ ಅವರ ಎರಡನೇ ಅವಧಿ ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯದ್ದಾಗಿತ್ತು. ಅವರ ಮೊದಲ ಅವಧಿಯು ಇಂದಿರಾ ಗಾಂಧಿಯವರು ಘೋಷಿಸಿದ ತುರ್ತು ಪರಿಸ್ಥಿತಿಯ ಸಮಯವನ್ನು ಒಳಗೊಂಡಿತ್ತು.
2. ಒಂದು ಅವಧಿ ಪೂರ್ಣಗೊಳಿಸಿ, ಚುನಾವಣೆಯಲ್ಲಿ ಸೋತು, ಮತ್ತೆ ಮುಖ್ಯಮಂತ್ರಿಯಾದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ಹಾಲಿ ಮುಖ್ಯಮಂತ್ರಿಯಾಗಿ ಎರಡನೇ ಚುನಾವಣೆಯಲ್ಲಿ ಗೆದ್ದಿದ್ದರು. ರಾಮಕೃಷ್ಣ ಹೆಗಡೆ ಅವರು ಅಧಿಕಾರಕ್ಕೆ ಮರಳಿದ ಕೊನೆಯ ಮುಖ್ಯಮಂತ್ರಿಯಾಗಿದ್ದರು, ಆದರೆ ಅವರು ತಮ್ಮ ಮೊದಲ ಅವಧಿಯ ನಂತರ (1983-85) ಮಧ್ಯಂತರ ಚುನಾವಣೆಗೆ ಕರೆ ನೀಡಿದರು. 1985ರಲ್ಲಿ ಗೆದ್ದು 1988ರವರೆಗೆ ಮುಖ್ಯಮಂತ್ರಿಯಾಗಿದ್ದರು.

3. ಈ ಅವಧಿ ಪೂರ್ಣಗೊಳಿಸಿದರೆ ಕರ್ನಾಟಕದಲ್ಲಿ ಎರಡು ಪೂರ್ಣ ಅವಧಿ ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಒಂದೇ ಒಂದು ಅವಧಿಯನ್ನು ಪೂರ್ಣಗೊಳಿಸಿಲ್ಲ.
4. ಸಿದ್ದರಾಮಯ್ಯ 2006 ರಲ್ಲಿ ಜನತಾ ದಳದಿಂದ ಕಾಂಗ್ರೆಸ್‌ಗೆ ಪಕ್ಷಾಂತರವಾದರು. ಬಳಿಕ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾದರು.












Click it and Unblock the Notifications