ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಕನ್ನಡಕ್ಕೆ 32 ಕೋಟಿ, ಉರ್ದುಗೆ 100 ಕೋಟಿ ?!
ರಾಜ್ಯ ಸರ್ಕಾರವು ಕನ್ನಡಕ್ಕಿಂತ ಉರ್ದು ಭಾಷೆಗೆ ಹೆಚ್ಚಿನ ಅನುದಾನ ನೀಡಿದೆ ಎನ್ನಲಾದ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಬೃಹತ್ ಅಭಿಯಾನಗಳು ನಡೆದಿವೆ. ಅಲ್ಲದೇ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಕರ್ನಾಟಕದಲ್ಲಿ ಕನ್ನಡ ಕಲಿಯಬೇಕು ಹಾಗೂ ಕನ್ನಡವನ್ನೇ ಬಳಸಬೇಕು ಎನ್ನುವ ಆಗ್ರಹಗಳ ನಡುವೆ ದಿನೇ ದಿನೇ ರಾಜ್ಯ ಸರ್ಕಾರದ ಪ್ರಭಾವಿ ಸಚಿವರು ಹಾಗೂ ರಾಜ್ಯ ಸರ್ಕಾರವೇ ಮುಂದಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಕರ್ನಾಟಕದಲ್ಲಿ ಕನ್ನಡಕ್ಕಿಂತ ಉರ್ದುಗೇ ಹೆಚ್ಚು ಅನುದಾನ ನೀಡಲಾಗಿದೆ ಎನ್ನುವ ವಿಚಾರವು ಭಾರೀ ವಿರೋಧಕ್ಕೆ ಕಾರಣವಾಗುತ್ತಿದೆ.
ಕರ್ನಾಟಕ ಸರ್ಕಾರವು ಕನ್ನಡದ ಅಸ್ಮಿತೆಯ ವಿಚಾರದಲ್ಲಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ಕೆಲವು ಪ್ರಭಾವಿ ಸಚಿವರು ಬಹಿರಂಗವಾಗಿ ಉರ್ದು ಭಾಷೆಯನ್ನು ಬಳಕೆ ಮಾಡುತ್ತಿರುವುದು. ಸರ್ಕಾರದ ಕಾರ್ಯಕ್ರಮಗಳಲ್ಲಿ ಬೋರ್ಡ್, ಬ್ಯಾನರ್‌ಗಳು ಉರ್ದುವಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಇದೀಗ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಉರ್ದು ಅಭಿವೃದ್ಧಿಗೆ ಕನ್ನಡಕ್ಕಿಂತಲೂ ಮೂರು ಪಟ್ಟು ಹೆಚ್ಚು ಅನುದಾನ ನೀಡಿದೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಏನಿದು ಚರ್ಚೆ ?
ಕರ್ನಾಟಕ ಸರ್ಕಾರವು ಅನವಶ್ಯಕವಾಗಿ ಕರ್ನಾಟಕದಲ್ಲಿ ಉರ್ದು ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ನಡೆದುಕೊಳ್ಳುತ್ತಿದೆ. ಕನ್ನಡದೊಂದಿಗೆ ಇತರ ಭಾಷೆಗಳನ್ನು ತೆಗೆದುಕೊಂಡು ಹೋಗಬೇಕು. ಕರ್ನಾಟಕದಲ್ಲಿ ಕನ್ನಡ ಮೊದಲು ಬಳಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.
ಕನ್ನಡಕ್ಕೆ 32 ಕೋಟಿ, ಉರ್ದುಗೆ 100 ಕೋಟಿ ?
ಬರಹಗಾರ ಸುನೀಲ್ ಜೆ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು. ಅಷ್ಟಕ್ಕೂ ಈ ನೆಲದ ನುಡಿಯಲ್ಲದ ಉರ್ದುಗೆ ಯಾಕೆ ಇಷ್ಟೊಂದು ಬಜೆಟ್? ಕರ್ನಾಟಕದಲ್ಲಿನ ಮುಸ್ಲಿಮರ ತಾಯ್ನುಡಿ ಮತಾಂತರದ ನಂತರ ಉರ್ದುವಾಗಿ ಬದಲಾಯಿತೋ ಅಥವಾ ಅವರು ಹೊರಗಿನಿಂದ ವಲಸೆ ಬಂದವರೋ ಗೊತ್ತಿಲ್ಲ. ಆದರೆ ಅವರನ್ನು ಹಂತಹಂತವಾಗಿ ಕನ್ನಡದ ಕಡೆ ತರಬೇಕಾದ್ದು ರಾಜ್ಯ ಸರ್ಕಾರದ ಕೆಲಸ. ಮರಾಠಿ, ಲಂಬಾಣಿ, ಕೊಂಕಣಿ, ತೆಲುಗು, ತಮಿಳು ಸೇರಿದಂತೆ ಉಳಿದವರನ್ನೂ ಕಾಲಕ್ರಮೇಣ ಕನ್ನಡಕ್ಕೆ ತರೋ ಕೆಲಸ ಮಾಡಿ ಎಂದರೆ, ಈ ಕಾಂಗ್ರೆಸ್ ನವರು ತದ್ವಿರುದ್ಧವಾದ ಕೆಲಸಗಳನ್ನೇ ಮಾಡ್ತಿದಾರೆ ಎಂದು ಕಿಡಿಕಾರಿದ್ದಾರೆ.

ಭಾಷಾ-ನಿರ್ದಿಷ್ಟ ಬಜೆಟ್ ಹಂಚಿಕೆಗಳ (Language-Specific Budget Allocations) ವಿವರವನ್ನು ಅವರು ಹಂಚಿಕೊಂಡಿದ್ದಾರೆ. ಇದರಲ್ಲಿ 32 ಕೋಟಿ ಕನ್ನಡಕ್ಕೆ ಹಾಗೂ ಉರ್ದುಗೆ ಬರೋಬ್ಬರಿ 100 ಕೋಟಿ ರೂಪಾಯಿ ನೀಡಿದೆ ಎಂದು ಹೇಳಲಾಗಿದೆ.
ಉರ್ದು ಪ್ರಿಯ ಸಿದ್ದರಾಮಯ್ಯನವರಿಂದ ಕನ್ನಡಿಗರಿಗೆ ಮತ್ತೊಂದು ಮಹಾ ದ್ರೋಹ!
— BJP Karnataka (@BJP4Karnataka) May 26, 2025
ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲು, ಕನ್ನಡ ಭಾಷೆಗೆ ಕೇವಲ ₹32 ಕೋಟಿ.
ಸಿಎಂ @siddaramaiah ಅವರೆ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ!
ತುಳು, ಕೊಂಕಣಿ, ಕೊಡವ ಹಾಗು ಅರೆಭಾಷೆ ನಮ್ಮ ಕರ್ನಾಟಕದ ಭಾಷೆಗಳಲ್ಲವೇ?… pic.twitter.com/kutLkNYMYa
ಕರ್ನಾಟಕ ಸರ್ಕಾರದ ನಿರ್ಧಾರಗಳಿಗೆ ಕನ್ನಡಿಗರ ಛೀಮಾರಿ!
* ಬ್ರ್ಯಾಂಡ್ ಬೆಂಗಳೂರು & ಗ್ರೇಟರ್ ಬೆಂಗಳೂರು ಎಂದು ಇಂಗ್ಲಿಷ್ ಪದಗಳನ್ನು ಬಳಕೆ ಮಾಡಲಾಗಿದೆ. ಕನ್ನಡದ ಪದ ಬಳಕೆಯನ್ನು ಕೈಬಿಡಲಾಗಿದೆ.
* ಇದರ ನಡುವೆ ಕರ್ನಾಟಕ ಸರ್ಕಾರವು ರಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡಿದೆ. ಆದರೆ, ಆದೇಶದಲ್ಲಿ ಹಿಂದಿ ಬಳಕೆಯಾಗಿದೆ.!
* ಕರ್ನಾಟಕದ ಪ್ರಮುಖ ಹಾಗೂ ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರ್ಯಾಂಡ್ ಅಂಬಾಸಿಡರ್ ತೆಲುಗು ನಟಿ ತಮನ್ನಾ ಭಾಟಿಯಾ ಆಯ್ಕೆ. ಎರಡು ವರ್ಷದ ಅವಧಿಗೆ ಬರೋಬ್ಬರಿ 36 ಕೋಟಿ ರೂಪಾಯಿ ಖರ್ಚು!












Click it and Unblock the Notifications