Breaking: ರಾಜ್ಯದಲ್ಲಿಂದು 308 ಕೇಸ್, ಒಟ್ಟು ಸೋಂಕು 6824ಕ್ಕೆ ಏರಿಕೆ
ಬೆಂಗಳೂರು, ಜೂನ್ 13: ಕರ್ನಾಟಕದಲ್ಲಿಂದು ಹೊಸದಾಗಿ 308 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6824ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Recommended Video
ಇಂದು ವರದಿಯಾದ ಒಟ್ಟು ಪ್ರಕರಣ ಪೈಕಿ ಕಲಬುರಗಿಯಲ್ಲಿ 67, ಯಾದಗಿರಿಯಲ್ಲಿ 52, ಬೀದರ್‌ನಲ್ಲಿ 42, ಬೆಂಗಳೂರು ನಗರದಲ್ಲಿ 31. ದಕ್ಷಿಣ ಕನ್ನಡದಲ್ಲಿ 30, ಧಾರವಾಡದಲ್ಲಿ 20, ಉಡುಪಿಯಲ್ಲಿ 14, ಹಾಸನದಲ್ಲಿ 11, ಬಳ್ಳಾರಿಯಲ್ಲಿ 11 ಜನರಿಗೆ ಕೊರೊನಾ ಖಚಿತವಾಗಿದೆ.
ಇನ್ನುಳಿದಂತೆ ವಿಜಯಪುರದಲ್ಲಿ 6, ರಾಯಚೂರು ಮತ್ತು ಉತ್ತರ ಕನ್ನಡದಲ್ಲಿ ತಲಾ 5 ಕೇಸ್, ಕೋಲಾರದಲ್ಲಿ 4, ದಾವಣಗೆರೆಯಲ್ಲಿ 3, ಮಂಡ್ಯ ಮತ್ತು ಹಾವೇರಿಯಲ್ಲಿ ತಲಾ 2, ಮೈಸೂರು, ಬಾಗಲಕೋಟೆ, ರಾಮನಗರದಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.

ಇಂದು 209 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಚೇತರಿಸಿಕೊಂಡಿರುವವರ ಸಂಖ್ಯೆ 3648. ಪ್ರಸ್ತುತ ರಾಜ್ಯದಲ್ಲಿ 3092 ಕೇಸ್ ಸಕ್ರಿಯವಾಗಿದೆ.
ಐಸಿಯು ವಾರ್ಡ್‌ನಲ್ಲಿ 15 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವರದಿಯಾದ ಪ್ರಕರಣಗಳ ಪೈಕಿ 25 ಮಂದಿ ಅಂತರರಾಷ್ಟ್ರೀಯ ಪ್ರಯಾಣ ಹೊಂದಿದ್ದಾರೆ. 208 ಮಂದಿ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.












Click it and Unblock the Notifications