ಕೇಂದ್ರ ಬಜೆಟ್; ಕರ್ನಾಟಕಕ್ಕೆ ಮೂರು ಹೊಸ ರೈಲು ಮಾರ್ಗ

ಬೆಂಗಳೂರು, ಫೆಬ್ರವರಿ 09 : ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮೂರು ನೂತನ ರೈಲು ಮಾರ್ಗವನ್ನು ನೀಡಲಾಗಿದೆ. ಬಹುನಿರೀಕ್ಷಿತ ಕುಶಾಲನಗರ- ಮೈಸೂರು ರೈಲು ಮಾರ್ಗಕ್ಕೂ ಕೇಂದ್ರ ಒಪ್ಪಿಗೆ ಕೊಟ್ಟಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ಹೇಳಿಕೆ ನೀಡಿದ್ದಾರೆ. "ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ರೈಲು ಯೋಜನೆಗಳಿಗೆ ಕಳೆದ ವರ್ಷದ ಬಜೆಟ್‌ಗಿಂತ ಹೆಚ್ಚು ಅನುದಾನ ನೀಡಲಾಗಿದೆ. ರಾಜ್ಯಕ್ಕೆ ಒಟ್ಟು 3085 ಕೋಟಿ ಅನುದಾನ ಸಿಕ್ಕಿದೆ" ಎಂದರು.

ಬಜೆಟ್‌ನಲ್ಲಿ ಬೆಳಗಾವಿ-ಧಾರವಾಡ, ಮೈಸೂರು-ಕುಶಾಲನಗರ, ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗಗಳು ರಾಜ್ಯಕ್ಕೆ ಸಿಕ್ಕಿವೆ. ಶೀಘ್ರದಲ್ಲೇ ಈ ಯೋಜನೆಯ ಕಾಮಗಾರಿಗಳು ಆರಂಭವಾಗಲಿವೆ.

3 New Railway Line For Karnataka

ಮೂರು ನೂತನ ರೈಲು ಮಾರ್ಗದ ಜೊತೆ 6 ಹೊಸ ರೈಲುಗಳನ್ನು ಕರ್ನಾಟಕಕ್ಕೆ ನೀಡಲಾಗಿದೆ. ಯಾವ ಮಾರ್ಗದಲ್ಲಿ ಹೊಸ ರೈಲುಗಳನ್ನು ಓಡಿಸಬೇಕು ಎಂದು ಶೀಘ್ರದಲ್ಲಿಯೇ ತೀರ್ಮಾನಿಸಲಾಗುತ್ತದೆ.

ರೈಲು ಮಾರ್ಗದ ಜೊತೆಗೆ ಮೈಸೂರಿನ ನಾಗನಹಳ್ಳಿಯಲ್ಲಿ ಸ್ಯಾಟಲೈಟ್ ರೈಲ್ವೆ ನಿಲ್ದಾಣ ಸ್ಥಾಪಿಸಲು ಅನುಮೋದನೆ ಸಿಕ್ಕಿದೆ. ಶಿವಮೊಗ್ಗದಲ್ಲಿ ಕೋಚ್ ಡಿಪೋವನ್ನು ಸ್ಥಾಪಿಸಲು ಸಹ ಬಜೆಟ್‌ನಲ್ಲಿ ಒಪ್ಪಿಗೆ ಕೊಡಲಾಗಿದೆ.

ಕೋಲಾರಕ್ಕೆ ಮಂಜೂರಾಗಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಬದಲು ರೈಲ್ವೆ ವರ್ಕ್ ಶಾಪ್ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ 495 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

"2022ರೊಳಗೆ ಕರ್ನಾಟಕದ ಎಲ್ಲಾ ಮಾರ್ಗದ ಜೋಡಿ ಹಳಿ ಕಾಮಗಾರಿ, ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ. ಹುಬ್ಬಳ್ಳಿ-ಬೆಂಗಳೂರು ನಡುವಿನ ರೈಲು ಪ್ರಯಾಣದ ಅವಧಿಯನ್ನು 5 ಗಂಟೆಗೆ ಇಳಿಸಲಾಗುತ್ತದೆ" ಎಂದು ಸುರೇಶ್ ಅಂಗಡಿ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+