ಗದಗದಲ್ಲಿ ಮೇಲ್ಛಾವಣಿ ಕುಸಿದು 3 ಸಾವು: ಮಳೆಗೆ ಇದುವರೆಗೂ ಮೃತರಾದವರ ಸಂಖ್ಯೆ 19!
ಗದಗ, ಅಕ್ಟೋಬರ್ 16: ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡ ಮನಕಲಕುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡದೆದಿದೆ. ಮೃತರನ್ನು ಮಾಬುಬೀ ಮುಚ್ಚಾಲಿ (50), ಮೊಮ್ಮಗಳಾದ ನಾಜಮೀನ್ (8), ಮುಸ್ಕಾನ್ (6) ಎಂದು ಗುರುತಿಸಲಾಗಿದೆ.
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಈವರೆಗೆ 19 ಜನ ಅಸುನೀಗಿದಂತಾಗಿದೆ. ಮಳೆ ಹಾನಿಯನ್ನು ಅವಲೋಕಿಸಲು ಎಲ್ಲಾ ಶಾಸಕರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಲ್ಲಿದೆ.
ಉಡುಪಿಯ ಕೊಲ್ಲೂರಿನಲ್ಲಿ 18 ಸೆಂ.ಮೀ. ಮಳೆಯಾಗಿ ಅತ್ಯಂತ ಹೆಚ್ಚು ಮಳೆಯಾದ ದಾಖಲೆ ಬರೆದಿದ್ದರೆ ಉಡುಪಿಯ ಕಾರ್ಕಳ ಮತ್ತು ಕೋಟದಲ್ಲಿ 13 ಸೆಂ.ಮೀ. ಮಳೆಯಾಗಿದೆ.
ಮೂಡಬಿದಿರೆ, ಕುಂದಾಪುರದಲ್ಲಿ ತಲಾ 10 ಸೆಂ.ಮೀ., ಹೊಸಕೋಟೆ, 9 ಸೆಂ.ಮೀ., ಶ್ರವಣಬೆಳಗೋಳ 8 ಸೆಂ.ಮೀ., ಹಾವೇರಿ, ರಾಣೆಬೆನ್ನೂರು, ಬರಗೂರುಗಳಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಇದರೊಂದಿಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಲೆನಾಡು, ಅರೆಮಲೆನಾಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.












Click it and Unblock the Notifications