ರಾಜ್ಯದಲ್ಲಿ 2869 ನಕಲಿ ವೈದ್ಯರು, ಶಿವಮೊಗ್ಗ ನಂಬರ್ ಒನ್

Posted By:
Subscribe to Oneindia Kannada

ಬೆಂಗಳೂರು, ಜೂನ್ 19: ಅನಾರೋಗ್ಯ ಎಂದು ಯಾವುದಾದರೂ ವೈದ್ಯರ ಬಳಿ ಹೋಗಬೇಕಾದರೆ ಎಚ್ಚರ! ಏಕೆಂದರೆ ರಾಜ್ಯದಲ್ಲಿ 2869 ನಕಲಿ ವೈದ್ಯರಿದ್ದಾರೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವರೇ ಸೋಮವಾರ ಮೇಲ್ಮನೆಯಲ್ಲಿ ಉತ್ತರ ನೀಡಿದ್ದಾರೆ.

ವೈದ್ಯರು ಬೇಕಾಗಿದ್ದಾರೆ! ಮೈಸೂರಿನಲ್ಲಿ ಖಾಲಿ ಉಳಿದಿದೆ 536 ಹುದ್ದೆ!

ಸಂಕನೂರು ಅಪ್ಪಾಜಿ ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಆರ್.ರಮೇಶ್ ಕುಮಾರ್, ರಾಜ್ಯದಲ್ಲೇ ಅತಿ ಹೆಚ್ಚು ನಕಲಿ ವೈದ್ಯರು ಅಂದರೆ 634 ಮಂದಿ ಶಿವಮೊಗ್ಗದಲ್ಲಿ ಇದ್ದಾರೆ. ಆ ನಂತರದ ಸ್ಥಾನಗಳಲ್ಲಿ ಬೀದರ್ (276) ಹಾಗೂ ಸಚಿವರೇ ಪ್ರತಿನಿಧಿಸುವ ಜಿಲ್ಲೆ ಕೋಲಾರ (273) ಇದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

2869 Quack in Karnataka, health minister KR Rameshkumar

ನಕಲಿ ವೈದ್ಯರ ಪತ್ತೆಗಾಗಿಯೇ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ವರದಿ ಬಂದ ಕೂಡಲೇ ನಕಲಿ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಆಯುಷ್, ಯುನಾನಿ ಹೆಸರಿನಲ್ಲಿ ನಕಲಿ ವೈದ್ಯರು ಇದ್ದಾರೆ ಎಂದು ಹೇಳಿದ ಅವರು, ಯಾವ ಮುಲಾಜಿಲ್ಲದೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

2017 ಎಂಬಿಬಿಎಸ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

ಇದೇ ವೇಳೆ ಮಾತನಾಡಿದ ಸಂಕನೂರು ಅಪ್ಪಾಜಿಗೌಡ, ಸರಕಾರವು ನಾಟಿ ವೈದ್ಯರು ಹಾಗೂ ಪಾರಂಪರಿಕವಾಗಿ ಔಷಧ ನೀಡುತ್ತಾ ಬಂದವರನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
2869 Quack in Karnataka. Shivamogga stood at number one place with 634. Followed by Bidar (276) and Kolar (276), health minister KR Ramesh Kumar gives information in Upper house on Monday to Sankanur Appaji Gowda's question.
Please Wait while comments are loading...