ಕರ್ನಾಟಕದಲ್ಲಿ ಒಂದೇ ದಿನ ಕೊರೊನಾಗೆ 530 ಮಂದಿ ಸಾವು
ಬೆಂಗಳೂರು, ಮೇ 26: ಕರ್ನಾಟಕದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಯಿತು ಎಂದು ನಿರಾಳವಾಗಿ ಇರುವಂತಿಲ್ಲ. ಮಂಗಳವಾರ ಇಳಿಕೆಯಾದ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಬುಧವಾರವೇ ಏರಿಕೆಯಾಗಿರುವುದು ಅಂಕಿ-ಅಂಶಗಳಿಂದ ಕಂಡು ಬಂದಿದೆ.
ರಾಜ್ಯದಲ್ಲಿ ಒಂದೇ ದಿನ 26,811 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 40,741 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 530 ಜನರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 24,99,784 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 20,62,910 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 26,929 ಜನರು ಬಲಿಯಾಗಿದ್ದಾರೆ. ಉಳಿದಂತೆ 4,09,924 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೊನಾವೈರಸ್ ಪ್ರಕರಣ?
ರಾಜ್ಯದಲ್ಲಿ ಒಟ್ಟು 26,811 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 245, ಬಳ್ಳಾರಿ 796, ಬೆಳಗಾವಿ 1205, ಬೆಂಗಳೂರು ಗ್ರಾಮಾಂತರ 740, ಬೆಂಗಳೂರು 6433, ಬೀದರ್ 61, ಚಾಮರಾಜನಗರ 425, ಚಿಕ್ಕಬಳ್ಳಾಪುರ 313, ಚಿಕ್ಕಮಗಳೂರು 585, ಚಿತ್ರದುರ್ಗ 431, ದಕ್ಷಿಣ ಕನ್ನಡ 729, ದಾವಣಗೆರೆ 1309, ಧಾರವಾಡ 853, ಗದಗ 393, ಹಾಸನ 1471, ಹಾವೇರಿ 330, ಕಲಬುರಗಿ 175, ಕೊಡಗು 296, ಕೋಲಾರ 907, ಕೊಪ್ಪಳ 491, ಮಂಡ್ಯ 805, ಮೈಸೂರು 2792, ರಾಯಚೂರು 265, ರಾಮನಗರ 240, ಶಿವಮೊಗ್ಗ 839, ತುಮಕೂರು 1399, ಉಡುಪಿ 973, ಉತ್ತರ ಕನ್ನಡ 786, ವಿಜಯಪುರ 337, ಯಾದಗಿರಿ 187 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications