ಕಾರವಾರ: ಹಡಗು ಮುಳುಗಡೆ, ತಪ್ಪಿದ ಭಾರೀ ಅನಾಹುತ
ಕಾರವಾರ, ಸೆಪ್ಟೆಂಬರ್ 28: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸ್ಸಾಗುತ್ತಿದ್ದ ವೇಳೆ ಇಲ್ಲಿನ ಕಾಸರಗೋಡು ಅಳಿವೆ ತೀರದಲ್ಲಿ ಯಾಂತ್ರಿಕೃತ ಹಡಗು ಮುಳುಗಡೆಯಾಗಿದೆ.
ಅಳಿವೆಯಲ್ಲಿನ ಹೂಳಿನಿಂದಾಗಿ ಯಾಸಿನ್ ಹೆಸರಿನ ಬೋಟ್ ಮುಳುಗಡೆಯಾಗುತ್ತಿರುವುದನ್ನು ಗಮನಿಸಿದ ಇತರೆ ಮೀನುಗಾರರು ಮೂರು ಬೋಟ್ ಗಳ ಮೂಲಕ ತೆರಳಿ ಸಮುದ್ರ ಪಾಲಾಗುತ್ತಿದ್ದ 23 ಮೀನುಗಾರರನ್ನು ರಕ್ಷಿಸಿದ್ದಾರೆ.

ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ಈ ಅವಘಡ ಸಂಭವಿಸಿದೆ. ಮೀನುಗಾರಿಕೆ ಇಲಾಖೆಗೆ ಈ ಹಿಂದೆ ಅಳಿವೆಯಲ್ಲಿನ ಹೂಳನ್ನು ತೆಗೆಯುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚಿಸಿದ್ದರು.
ಆದರೆ, ಇಲಾಖೆಯ ನಿರ್ಲಕ್ಷ್ಯದಿಂದ ಪ್ರತೀ ಬಾರಿಯು ಈ ಅಳಿವೆಯಲ್ಲಿ ಬೋಟುಗಳು ಮುಳುಗಡೆಯಾಗುತ್ತಿವೆ. ಈಗಾಗಲೇ ಅನೇಕ ಬಾರಿ ಇಂಥ ಘಟನೆ ನಡೆದರೂ ಕೂಡ ಇಲಾಖೆ ಬೇಜವಾಬ್ದಾರಿ ಮೆರೆದಿದೆ.












Click it and Unblock the Notifications