• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ಇಂದು 2,198 ಸೋಂಕಿತರು ಬಿಡುಗಡೆ

|

ಬೆಂಗಳೂರು, ನವೆಂಬರ್ 14: ರಾಜ್ಯದಲ್ಲಿ ಇಂದು 2154 ಹೊಸ ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಗಳಲ್ಲಿ 17 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಇಂದು 2198 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 860082ಕ್ಕೆ ತಲುಪಿದ್ದು, ಮೃತರ ಸಂಖ್ಯೆ 11508ಕ್ಕೆ ಏರಿಕೆಯಾಗಿದೆ. ಜತೆಗೆ 820590 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ 27965 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ನಿಂದ ಸಾವಿಗೀಡಾಗುತ್ತಿರುವ ಪ್ರಕರಣಗಳು ಶೇ 0.78ರಷ್ಟಿದೆ. ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ 1.85ರಷ್ಟಿದೆ.

ಬೆಂಗಳೂರು ನಗರದಲ್ಲಿ ಇಂದು 1195 ಪ್ರಕರಣಗಳು ಪತ್ತೆಯಾಗಿವೆ. 9 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಒಟ್ಟು ಕೋವಿಡ್ ಸಾವಿನ ಸಂಖ್ಯೆ 3997ಕ್ಕೆ ತಲುಪಿದೆ. ಇಂದು 771 ಮಂದಿ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳು 18,184ಕ್ಕೆ ತಲುಪಿದೆ.

   ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada

   ಮೈಸೂರಿನಲ್ಲಿ 137, ಹಾಸನದಲ್ಲಿ 103 ಪ್ರಕರಣಗಳು ವರದಿಯಾಗಿವೆ. ಬೀದರ್‌ನಲ್ಲಿ ಅತಿ ಕಡಿಮೆ, 3 ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆ 8, ಬಳ್ಳಾರಿ 34, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 60, ಚಾಮರಾಜನಗರ 14, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 17, ಚಿತ್ರದುರ್ಗ 24, ದಕ್ಷಿಣ ಕನ್ನಡ 40, ದಾವಣಗೆರೆ 29, ಧಾರವಾಡ 12, ಗದಗ 11, ಹಾವೇರಿ 20, ಕಲಬುರಗಿ 15, ಕೊಡಗು 20, ಕೋಲಾರ 39, ಕೊಪ್ಪಳ 13, ಮಂಡ್ಯ 46, ರಾಯಚೂರು 19, ರಾಮನಗರ 11, ಶಿವಮೊಗ್ಗ 38, ತುಮಕೂರು 61, ಉಡುಪಿ 27, ಉತ್ತರ ಕನ್ನಡ 42, ವಿಜಯಪುರ 33 ಮತ್ತು ಯಾದಗಿರಿ ಜಿಲ್ಲೆಯಲ್ಲಿ 11 ಪ್ರಕರಣಗಳು ದಾಖಲಾಗಿವೆ.

   English summary
   2154 fresh cases and 17 deaths were reported in Karnataka on Saturday. 2198 people were discharged today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X