Get Updates
Get notified of breaking news, exclusive insights, and must-see stories!

Police Transfer: 200 ಪೊಲೀಸರ ವರ್ಗಾವಣೆಗೆ ಪಟ್ಟಿ ತಯಾರು, ಶೀಘ್ರವೇ ಆದೇಶ

ಹಾವೇರಿ, ಜುಲೈ 21: ಕರ್ನಾಟಕದಲ್ಲಿ ಒಂದೇ ಠಾಣೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಲು ಸಿದ್ಧತೆ ಆರಂಭಗೊಂಡಿವೆ. ಈಗಾಗಲೇ ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರು ಈ ಕುರಿತು ಖಡಕ್ ಸೂಚನೆ ನೀಡಿದ್ದಾರೆ.

ಸದ್ಯ ಹಾವೇರಿ ಜಿಲ್ಲೆಯಲ್ಲಿ 200 ಜನ ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಪಟ್ಟಿ ಸಿದ್ಧವಾಗುತ್ತಿದೆ. ಒಂದೇ ಘಟಕ ಇಲ್ಲವೇ ಪೊಲೀಸ್ ಠಾಣೆಯಲ್ಲಿ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ವರ್ಗಾವಣೆಗೆ ತೀರ್ಮಾನಿಸಲಾಗಿದೆ. ಆದ‍ಷ್ಟು ಶೀಘ್ರವೇ ವರ್ಗಾವಣೆ ಆದೇಶ ಆಗಲಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

200 Police Staff Transfer Soon Who working since 5 Years in Single station

ಅಪರಾಧಗಳಿಗೆ ಕುಮ್ಮಕ್ಕು ನೀಡುವ ಸಾಧ್ಯತೆ

ಮೇಲಧಿಕಾರಿಗಳ ಸೂಚನೆ ಮೇರೆಗೆ ಹೆಚ್ಚುವರಿ ಪೊಲೀಸ್ ಎಸ್‌ಪಿ ಸಿ.ಗೋಪಾಲ್ ಹಾಗೂ ಜಿಲ್ಲಾ ಎಸ್‌ಪಿ ಅಂಶುಕುಮಾರ್ ಅವರು, ಯಾರೆಲ್ಲ ಐದು ವರ್ಷಕ್ಕೂ ಹೆಚ್ಚು ಸಮಯ ಒಂದೇ ಠಾಣೆಯಲ್ಲಿದ್ದಾರೆ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಂದೇ ಕಡೆ ಹೆಚ್ಚು ವರ್ಷ ಇದ್ದರೆ, ಅಪರಾಧ ಚಟುವಟಿಕೆಗಳಾದ, ಮರಳು ಅಕ್ರಮ ಸಾಗಾಟ, ಜೂಜು, ಮಟ್ಕಾದಂತಹ ಕಾರ್ಯಗಳಿಗೆ ಕೆಲವು ಸಿಬ್ಬಂದಿ ಕುಮ್ಮಕ್ಕು ನೀಡುತ್ತಿದ್ದಾರೆ.

ಇದಕ್ಕೆ ಅವಕಾಶ ನೀಡದಂತೆ ತಡೆಯಲು ಎಡಿಜಿಪಿ ಈ ನಿರ್ಧಾರ ಕೈಗೊಂಡಿದ್ದಾರೆ. ಒಂದೆ ಕಡೆ ಇರುವವರಿಂದ ಅವರ ವ್ಯಾಪ್ತಿಯಲ್ಲಿ ಅಕ್ರಮ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ದೂರಿದ್ದಾರೆ.

200 ಜನ ಪೊಲೀಸ್ ಸಿಬ್ಬಂದಿ ವರ್ಗಾವಣೆ ಶೀಘ್ರ

ಹಾವೇರಿ ಜಿಲ್ಲೆ ವ್ಯಾಪ್ತಿಯ 200 ಜನ ಪೊಲೀಸ್ ಸಿಬ್ಬಂದಿ ಬೇರೆ ಠಾಣೆ, ಬೇರೆ ಘಟಕಗಳಿಗೆ ಎತ್ತಂಗಡಿ ಆಗುವುದು ಬಹುತೇಕ ನಿಶ್ಚಿತವಾಗಿದೆ. ಪಟ್ಟಿ ಸಿದ್ಧತವಾಗುತ್ತಿದೆ. ಜಿಲ್ಲೆಯ ಗುತ್ತಲ, ಹಲಗೇರಿ, ಬ್ಯಾಡಗಿ, ಆಡೂರು, ಬಂಕಾಪುರ, ಹಾವೇರಿ ಶಹರ-ಗ್ರಾಮಾಂತರ-ಮಹಿಳಾ ಸಂಚಾರ, ರಟ್ಟಿಹಳ್ಳಿ, ಸವಣೂರು, ಶಿಗ್ಗಾವಿ ಹಾಗೂ ತಡಸ ಪೊಲೀಸ್ ಠಾಣೆಯಲ್ಲಿ ಐದು ವರ್ಷಗಳಿಂದ ಇರುವ ಪೊಲೀಸರ ಮಾಹಿತಿ ಆಧಾರದಲ್ಲಿ ವರ್ಗಾವಣೆ ಪಟ್ಟಿ ಶೀಘ್ರವೇ ಪ್ರಕಟಗೊಳ್ಳಲಿದೆ.

ಈ ಠಾಣೆಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್ ಮತ್ತು ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವರ ಪಟ್ಟಿ ತಯಾರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

200 Police Staff Transfer Soon Who working since 5 Years in Single station

ಪಟ್ಟಿಯಲ್ಲಿ ಯಾರೆಲ್ಲ ಇರುತ್ತಾರೆ?

ಇನ್ನೂ ಯಾವ ಠಾಣೆಯ ಸಿಬ್ಬಂದಿ ಬೇರಾವ ಪೊಲೀಸ್ ಠಾಣೆಗೆ ವರ್ಗಾವಣೆ ಆಗಬೇಕು ಎಂಬುದನ್ನು ಜಿಲ್ಲಾ ಎಸ್‌ಪಿ ನೇತೃತ್ವದಲ್ಲಿ ನಿರ್ಧಾರ ಮಾಡಿ, ಅಂತಿಮ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಅಕ್ರಮದಲ್ಲಿ ತೊಡಗಿದವರ ಜೊತೆಗೆ ಸಾರ್ವಜನಿಕರ ಬಳಿ ಅಸಭ್ಯವಾಗಿ ವರ್ತಿಸಿದವರು ಈ ವರ್ಗಾವಣೆ ಪಟ್ಟಿಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್ ಮತ್ತು ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬಿಟ್ಟು ಉಳಿದೆಲ್ಲ ಹಿರಿಯ ಪೊಲೀಸರು ಕಾಲ ಕಾಲಕ್ಕೆ ವರ್ಗಾವಣೆಗೊಳ್ಳುತ್ತಾರೆ. ಆದರೆ ಇವರು ಮಾತ್ರ ಒಂದೇ ಠಾಣೆಯಲ್ಲಿ ಹೆಚ್ಚಿನ ವರ್ಷಗಳ ಕಾಲ ಇರುತ್ತಾರೆ. ಸಾರ್ವಜನಿಕರಿಗೆ ಉತ್ತಮ ಪೊಲೀಸ್ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಇಂತಹ ಕ್ರಮಕ್ಕೆ ನಿರ್ಧರಿಸಲಾಗಿದೆ.

ಇದು ಹಾವೇರಿ ಮಾತ್ರವಲ್ಲದೇ ಇತರ ಜಿಲ್ಲೆಗಳಲ್ಲಿನ ಠಾಣೆಗಳಿಗೂ ಅನ್ವಯವಾಗುವಂತೆ ವಿಸ್ತರಣೆ ಆಗಬಹುದು. ಮೊದಲು ಈ ಜಿಲ್ಲೆಯಲ್ಲಿ ಸಿಬ್ಬಂದಿ ವರ್ಗಾವಣೆ ತ್ವರಿತವಾಗಿ ಆಗುವ ಲಕ್ಷಣಗಳು ಕಂಡು ಬಂದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+