Earthquacke in Raichur: ಹಬ್ಬದ ದಿನವೇ 'ಲಿಂಗಸೂರಿನಲ್ಲಿ ಭೂಕಂಪ'
ಬೆಂಗಳೂರು, ಅಕ್ಟೋಬರ್ 24: ಕಲ್ಯಾಣ ಕರ್ನಾಟಕ ಜಿಲ್ಲೆಯಾಗಿರುವ ರಾಯಚೂರಿನ ಲಿಂಗಸೂರು ತಾಲೂಕು ವ್ಯಾಪ್ತಿಯ ಕೆಲವೆಡೆ ಸೋಮವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವದಿಂದ ಗ್ರಾಮಸ್ಥರು ಕೆಲ ಹೊತ್ತು ಆತಂಕಕ್ಕೀಡಾದರು ಎನ್ನಲಾಗಿದೆ.
ಲಿಂಗಸೂರು ತಾಲೂಕಿನ ನಿಲೋಗಲ್, ವಿರಾಪುರ, ಹಟ್ಟಿ ಮತ್ತು ಗೆಜ್ಜಲಗಟ್ಟ ಗ್ರಾಮಗಳ 2.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಗ್ರಾಮಗಳ ಸೇರಿದಂತೆ ಒಟ್ಟು 2.6 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ.

ಸದ್ಯ ಈ ಭೂಕಂಪನಿಂದ ಅದೃಷ್ಟವಶಾತ್ ಯಾವುದೇ ತೊಂದರೆಗಳು ಅಥವಾ ಗ್ರಾಮಗಳಲ್ಲಿ ಹಾನಿ ಸಂಭವಿಸಿಲ್ಲ. ಈ ಕುರಿತು ಗ್ರಾಮಸ್ಥರು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.












Click it and Unblock the Notifications