17 ಶಂಕಿತ ಸಿಮಿ ಉಗ್ರರಿಗೆ ಹುಬ್ಬಳ್ಳಿ ಕೋರ್ಟ್ ಖುಲಾಸೆ
ಬೆಂಗಳೂರು, ಏ.30: ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ 17 ಸಿಮಿ ಸಂಘಟನೆ ಸದಸ್ಯರಿಗೆ ಶಂಕಿತ ಭಯೋತ್ಪಾದಕರು ಟ್ಯಾಗ್ ನಿಂದ ಮುಕ್ತಿ ಸಿಕ್ಕಿದೆ. ವಿವಿಧ ಭಯೋತ್ಪಾದನಾ ಕೇಸ್ ಗಳಿಂದ ಖುಲಾಸೆ ಸಿಕ್ಕಿದೆ.
2008ರಲ್ಲಿ ಹುಬ್ಬಳ್ಳಿಯಲ್ಲಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಸಫ್ದಾರ್ ಹುಸೇನ್ ನಗೋರಿ ಹಾಗೂ ಇನ್ನಿತರ ಸದಸ್ಯರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. [ಗೊತ್ತೇ... ಸಿಮಿ ಉಗ್ರವಾದ ತಳೆದಿದ್ದೇ ಕರ್ನಾಟಕದಲ್ಲಿ..!]

ಎಲ್ಲಾ 17 ಆರೋಪಿಗಳ ವಿರುದ್ಧ ಸರಿಯಾದ ಸಾಕ್ಷಿ ಆಧಾರ ಇಲ್ಲದ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಕೋರ್ಟ್ ಹೇಳಿದೆ. [ದಕ್ಷಿಣ ಭಾರತದಲ್ಲಿ ಸಿಮಿಗೆ ಇದೆ ಶಕ್ತಿಯುತ ಜಾಲ]
ಘಟನೆ ಹಿನ್ನಲೆ: 2008ರ ಜನವರಿ 30ರಂದು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಿಮ್ಸ್) ಮೇಲೆ ರೈಡ್ ಮಾಡಿ ಪೊಲೀಸರು ಅನೇಕ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದರು. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಇವರೆಲ್ಲ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಈ ಬಗ್ಗೆ ಸರಿಯಾದ ಸಾಕ್ಷಿ ಕಲೆ ಹಾಕುವಲ್ಲಿ ಪೊಲೀಸರು ವಿಫಲರಾದರು. ಹೀಗಾಗಿ ಶಂಕಿತ ಸಿಮಿ ಉಗ್ರರು ಖುಲಾಸೆಗೊಂಡಿದ್ದಾರೆ.












Click it and Unblock the Notifications