ಸಿಇಟಿ ದಾಖಲಾತಿ ಪರಿಶೀಲನೆಗೆ ರಾಜ್ಯಾದ್ಯಂತ 16 ನೋಡಲ್ ಕೇಂದ್ರ

ಬೆಂಗಳೂರು, ಮೇ 09: ದಾಖಲಾತಿ ಪರಿಶೀಲನೆಗೆ ಸಿಇಟಿ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು ರ್‍ಯಾಂಕ್ ಆಧಾರದ ಮೇಲೆ ಮೂಲ ದಾಖಲೆಗಳನ್ನು ದೃಢೀಕರಿಸಬೇಕಾಗುತ್ತದೆ.

ವಿದ್ಯಾರ್ಥಿಗಳು ಸಿಇಟಿ ರ್‍ಯಾಂಕ್ ಪಡೆದ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿರುವ ವೇಳಾಪಟ್ಟಿಗೆ ಅನುಸಾರವಾಗಿ ರಾಜ್ಯದ 16 ನೋಡಲ್ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು.

ಮೈಸೂರು, ಮಂಗಳೂರು, ಬೆಂಗಳೂರು, ಶಿವಮೊಗ್ಗ, ಕಾರವಾರ, ಬೆಳಗಾವಿ, ಕಲಬುರಗಿ, ವಿಜಯಪುರ, ರಾಯಚೂರು, ಧಾರವಾಡ, ಬಳ್ಳಾರಿ, ದಾವಣಗೆರೆ, ಬೀದರ್, ಕೊಪ್ಪಳ ಮತ್ತು ತುಮಕೂರಿನಲ್ಲಿ ನೋಡಲ್ ಕೇಂದ್ರಗಳಿವೆ. ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಯನ್ನು ಹೇಗೆ ನಮೂದಿಸಬೇಕು.

16 nodal centers for CET documents verification

ಸೀಟುಗಳ ಆಯ್ಕೆ ವಿಧಾನ ಸೇರಿ ಸಿಇಟಿಯ ಸಂಪೂರ್ಣ ಮಾಹಿತಿಯನ್ನು ನೋಡಲ್ ಕೇಂದ್ರಗಳಲ್ಲಿ ನೀಡಲಾಗುತ್ತದೆ.ದಾಖಲೆಗಳ ಪರಿಶೀಲನೆಯನ್ನು ಈ ವರ್ಷದಿಂದ ಸರ್ಕಾರ ಆನ್‌ಲೈನ್‌ ಮಾಡಬೇಕೆಂದುಕಕೊಂಡಿತ್ತು. ಆದರೆ, ಕೆಲವು ಇಲಾಖೆಗಳ ಅಸಹಕಾರದಿಂದ ಇದು ಸಾಧ್ಯವಾಗುತ್ತಿಲ್ಲ.

ಸರ್ಕಾರಿ ಸೀಟುಗಳಿಗೆ ಪ್ರವೇಶ ಕೋರುವ ವಿದ್ಯಾರ್ಥಿಗಳು ಅಗತ್ಯವಿರುವ ದಾಖಲೆಗಳ ಮೂಲಪ್ರತಿಯನ್ನು ಮತ್ತು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿರುವ ದಾಖಲೆಗಳ ಒಂದು ನಕಲು ಪ್ರತಿ ಜತೆಗೆ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

ವಿದ್ಯಾರ್ಥಿಗಳು ನೋಡಲ್ ಕೇಂದ್ರಕ್ಕೆ ಹೋಗುವ ಮುನ್ನ ರ್‍ಯಾಂಕ್, ದಾಖಲೆಗಳ ಪರಿಶೀಲನೆಯ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಿಕೊಳ್ಳಬೇಕು. ಪರಿಶೀಲನೆ ಪ್ರಕ್ರಿಯೆ ದಿನಾಂಕ ಮತ್ತು ಸಮಯಕ್ಕೆ ಸಂಬಂಧಿಸಿದಂತೆ ರ್‍ಯಾಂಕ್ ಗಳಿಸಿರುವ ಅರ್ಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮಾಹಿತಿ ಕಳಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+