ಕರ್ನಾಟಕ: ಒಂದು ದಿನದಲ್ಲಿ 12,209 ಮಂದಿಗೆ ಕೊರೊನಾವೈರಸ್

ಬೆಂಗಳೂರು, ಜೂನ್ 06: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಜೊತೆ ಜೊತೆಗೆ ಸಾವಿನ ಪ್ರಕರಣಗಳು ಇಳಿಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ವರದಿಯಾದ ಕೊವಿಡ್-19 ಅಂಕಿ-ಅಂಶಗಳು ಈ ಬಗ್ಗೆ ಸ್ಪಷ್ಟಪಡಿಸುತ್ತವೆ.
ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ 12209 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳ 320 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 25659 ಸೋಂಕಿತರು ಗುಣಮುಖರಾಗಿದ್ದಾರೆ.

ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 26,95,523 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 24,09,417 ಸೋಂಕಿತರು ಗುಣಮುಖರಾಗಿದ್ದು, 31,580 ಜನರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊರತಾಗಿ 2,54,505 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

12209 New Coronavirus Cases Reported in Karnataka Today, State Tally Rise to 2695523

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ರಾಜ್ಯದಲ್ಲಿ ಒಟ್ಟು 12209 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 166, ಬಳ್ಳಾರಿ 285, ಬೆಳಗಾವಿ 418, ಬೆಂಗಳೂರು ಗ್ರಾಮಾಂತರ 277, ಬೆಂಗಳೂರು 2944, ಬೀದರ್ 7, ಚಾಮರಾಜನಗರ 247, ಚಿಕ್ಕಬಳ್ಳಾಪುರ 348, ಚಿಕ್ಕಮಗಳೂರು 416, ಚಿತ್ರದುರ್ಗ 266, ದಕ್ಷಿಣ ಕನ್ನಡ 609, ದಾವಣಗೆರೆ 143, ಧಾರವಾಡ 262, ಗದಗ 133, ಹಾಸನ 655, ಹಾವೇರಿ 138, ಕಲಬುರಗಿ 60, ಕೊಡಗು 162, ಕೋಲಾರ 257, ಕೊಪ್ಪಳ 212, ಮಂಡ್ಯ 571, ಮೈಸೂರು 1237, ರಾಯಚೂರು 104, ರಾಮನಗರ 60, ಶಿವಮೊಗ್ಗ 456, ತುಮಕೂರು 698, ಉಡುಪಿ 494, ಉತ್ತರ ಕನ್ನಡ 360, ವಿಜಯಪುರ 190, ಯಾದಗಿರಿ 34 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Recommended Video

      High Command ಹೇಳಿದ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ | BS Yadiyurappa | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+