ಒಡಿಶಾ ಭೀಕರ ರೈಲು ಅಪಘಾತ: ಚಿಕ್ಕಮಗಳೂರಿನ 110 ಜನ ಪಾರಾಗಿದ್ದೇಗೆ?

ಬೆಂಗಳೂರು, ಜೂನ್‌ 03: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 233 ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ದೇಶದಲ್ಲೇ ಸೂತಕದ ಛಾಯೆ ಆವರಿಸಿರುವ ಈ ಭೀಕರ ರೈಲ್ವೆ ಅಪಘಾತ ಕೋರಮಂಡಲ್​​ ಎಕ್ಸಪ್ರೆಸ್​​, ಬೈಯಪ್ಪನಹಳ್ಳಿ ಸರ್‌​​ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್​​ ಮತ್ತು ಗೂಡ್ಸ್​​ ರೈಲುಗಳ ಮಧ್ಯೆ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಅಪಘಾತದಲ್ಲಿ ಕನ್ನಡಿಗರು ಸಹ ಇದ್ದು, ಅದೃಷ್ಟವಶಾತ್‌ ನೂರಕ್ಕೂ ಹೆಚ್ಚು ಮಂದಿ ಪ್ರಣಾಪಾಯದಿಂದ ಪಾರಾಗಿದ್ದಾರೆ.

https://kannada.oneindia.com/news/karnataka/110-karnataka-travellers-escaped-from-odisha-train-accident-296763.html

ಬೈಯಪ್ಪನಹಳ್ಳಿ ಸರ್‌​​ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಇವರು ಬೆಂಗಳೂರಿನಿಂದ ಕೊನೆಯ S5, S6, S7 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ರೈಲು ನಿನ್ನೆ (ಜೂ.02) ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್​ ಬದಲಿಸಿದೆ. ಇದರಿಂದ ಕಳಸ ತಾಲೂಕಿನ 110 ಜನ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊನೆಯ 4 ಬೋಗಿಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಇನ್ನು ಬೈಯಪ್ಪನಹಳ್ಳಿ ಈ ನಿಲ್ದಾಣದಿಂದ ರೈಲಿನಲ್ಲಿ 1,294 ಪ್ರಯಾಣಿಕರು ತೆರಳಿದ್ದರು ಎನ್ನಲಾಗಿದೆ.

ಇನ್ನು ಭೀಕರ ರೈಲ್ವೆ ಅಪಘಾತದ ಹಿನ್ನೆಯಲ್ಲಿ ಒಡಿಶಾ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಜೂನ್‌ 3ರಂದು ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಘಟನಾ ಸ್ಥಳಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿ ತಪ್ಪಿದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+