ಹಾವೇರಿಯಲ್ಲಿ ಬರ, ಉದ್ಯೋಗ ಸೃಷ್ಟಿಗೆ ದೇಶಪಾಂಡೆ ಭರವಸೆ

Posted By:
Subscribe to Oneindia Kannada

ಹಾವೇರಿ, ಡಿಸೆಂಬರ್ 16: ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಶೇ.85 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ಮಾನವ ದಿನಗಳನ್ನು ಹೆಚ್ಚುವರಿ ಸೃಷ್ಟಿ ಮಾಡಲಾಗುವದು ಎಂದು ಸಚಿವ ಆರ್ ವಿ ದೇಶಪಾಂಡೆ ತಿಳಿಸಿದರು.

ಸಚಿವ ಸಂಪುಟ ಉಪಸಮಿತಿ ಕುರ್ಸಾಪುರ ಗ್ರಾಮದಲ್ಲಿ ಕೆರೆ ಸಂಜೀವಿನಿ ಕಾಮಗಾರಿ ವೀಕ್ಷಿಸಿ ಮಾತನಾಡಿ, ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಪೂರೈಕೆಗೆ ಹಣದ ಕೊರತೆಯಿಲ್ಲ. ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಜೆಸಿಬಿ ಬಳಕೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.[ತುಮಕೂರಿಗೆ ಭೇಟಿ ನೀಡಿದ ಬರ ಅಧ್ಯಯನ ತಂಡ: ಪರಿಶೀಲನೆ]

10 lakh man days create in employment scheme: rv deshpande

ಹಾವೇರಿಯಲ್ಲಿ ಬರ ಪರಿಶೀಲನೆ
ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿಯಿಂದ ಹಾವೇರಿ ಜಿಲ್ಲೆಯಲ್ಲಿ ಬರ ಪರಿಶೀಲನೆ ಕಾರ್ಯ ನಡೆಯಿತು.

ಮುತ್ತಳ್ಳಿ ಗ್ರಾಮದಲ್ಲಿ ಹಿಂಗಾರು ಜೋಳ, ಗೋಧಿ ಬೆಳೆಹಾನಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಮ್ಮ ಹೊಲ ನಮ್ಮ ದಾರಿ ಕಾಮಗಾರಿಗಳು, ತಿಮ್ಮಾಪುರ ಗ್ರಾಮದ ಕೊಳವೆಬಾವಿ ಆಳಗೊಳಿಸುವ ಕಾಮಗಾರಿ, ಎನ್ ಎಂ ತಡಸ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ವೀಕ್ಷಿಸಿದರು.

10 lakh man days create in employment scheme: rv deshpande

ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್, ಶಾಸಕರಾದ ಬಸವರಾಜ ಬೊಮ್ಮಾಯಿ, ಸೋಮಣ್ಣ ಬೇವಿನಮರದ, ಜಿಲ್ಲಾಧಿಕಾರಿ ಡಾ.ವೆಂಕಟೇಶ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahatma Gandhi National Employment Guarantee Scheme in the additional creation of 10 lakh man days says Minister R.V. Deshpande in haveri.
Please Wait while comments are loading...