Shravanabelagola Constituency : ಈ ಬಾರಿ ಜೆಡಿಎಸ್ ಭದ್ರಕೋಟೆಯನ್ನು ಭೇದಿಸುತ್ತಾ ಕಾಂಗ್ರೆಸ್?
ಹಾಸನ, ಮಾರ್ಚ್ 27: ಶ್ರವಣಬೆಳಗೊಳ ಹಾಸನ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಜೈನ ಧಾರ್ಮಿಕ ಕೇಂದ್ರವಾಗಿದೆ. ಶ್ರವಣ ಬೆಳಗೊಳದಲ್ಲಿರುವ 58 ಅಡಿ ಎತ್ತರದ ಏಕಶಿಲ ಬಾಹುಬಲಿಯ ಪ್ರತಿಮೆ ವಿಶ್ವವಿಖ್ಯಾತವಾಗಿದೆ. ಇಲ್ಲಿ 12 ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಮಹಾಮಸ್ತಕಾಭಿಷೇಕ ನೆರವೆರಿಸಲಾಗುತ್ತದೆ.
ಕರ್ನಾಟಕದಲ್ಲಿ ಜೈನರ ಪುಣ್ಯಕ್ಷೇತ್ರವಾಗಿರುವ ಶ್ರವಣಬೆಳಗೊಳ ಕ್ಷೇತ್ರದ ರಾಜಕೀಯ ವಿಶ್ಲೇಷಣೆ ಇಲ್ಲಿದೆ. ರಾಜಕೀಯ ಚದುರಂಗದಾಟದಲ್ಲಿ ಅನೇಕ ಕೌತುಕಗಳನ್ನು ಕಂಡಿರುವ ಶ್ರವಣಬೆಳಗೊಳ ಕ್ಷೇತ್ರ ಈ ಬಾರಿಯೂ ಸಾಕಷ್ಟು ಕುತೂಹಲ ಕೆರಳಿಸಿದೆ.

ಚನ್ನರಾಯಪಟ್ಟಣ ತಾಲೂಕಿನಲ್ಲಿ ಕಲ್ಪವೃಕ್ಷ , ಕಬ್ಬು ಮೂಲ ಆರ್ಥಿಕ ಬೆಳೆಯಾಗಿದ್ದ ದಿನಗಳು ದೂರವಾಗಿ ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ ಹಾಗೂ ಸಹಕಾರಿ ವ್ಯವಸ್ಥೆಯೇ ಕುಟುಂಬದ ಆರ್ಥಿಕ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿದೆ. ಕೃಷಿ ಚಟುವಟಿಕೆಗಳತ್ತ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳದ ಯುವಶಕ್ತಿಗೆ ನಿರೀಕ್ಷಿತ ಕೆಲಸ ದೊರೆಯದಿರುವುದು ಮತ್ತೊಂದೆಡೆ ಸಮಸ್ಯೆಯಾಗಿ ಕಾಡುತ್ತಿದೆ.
| ಶ್ರವಣಬೆಳಗೊಳ ಕ್ಷೇತ್ರದ ಮತದಾರರ ವಿವರ |
| ಒಟ್ಟು ಮತದಾರರು - 2,12,070 |
| ಪುರುಷ ಮತದಾರರು - 1,06,029 |
| ಮಹಿಳಾ ಮತದಾರರು - 1,06,041 |
ಶ್ರವಣಬೆಳಗೊಳ ಕ್ಷೇತ್ರದ ಪ್ರಸ್ತುತ ರಾಜಕರಣ
ಈ ಕ್ಷೇತ್ರದಲ್ಲಿ ಚುನಾವಣೆಗಳು ಬಂತೆಂದರೆ ಬಿರುಸಿನ ಚಟುವಟಿಕೆಗಳು ಎಲ್ಲಕಡೆ ಗರಿಗೆದರಿಕೊಳ್ಳುತ್ತವೆ. ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಆ ಸಮುದಾಯದ ಅಭ್ಯರ್ಥಿಗಳೇ ಇದುವರೆವಿಗೂ ಗೆಲುವು ಸಾಧಿಸಿ ಶಾಸಕರಾಗಿ ಬಂದಿರುವುದು ಇತಿಹಾಸವಾಗಿದೆ.

ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ ಮತಗಳು ಈ ಬಾರಿ ಧೃವೀಕರಣವಾಗುತ್ತಿದ್ದು, ಇದರ ಪ್ರಯೋಜನ ಯಾರಿಗೆ ದೊರೆಯಲಿದೆ ಎಂಬುದು ಫಲಿತಾಂಶವನ್ನು ನಿರ್ಧರಿಸಲಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದವರು ಎಂಬ ನಾಮಬಲದೊಂದಿಗೆ ತಮ್ಮ ವರ್ಚಸ್ಸನ್ನು ದಿನೇದಿನೇ ಹೆಚ್ಚಿಸಿಕೊಳ್ಳುತ್ತಿರುವ ಹಾಲಿ ಶಾಸಕ ಸಿ.ಎನ್.ಬಾಲಕೃಷ್ಣ ಇದುವರೆಗೆ ದೊರೆತ ಎಲ್ಲ ಅವಕಾಶಗಳನ್ನು ಸಕ್ರಿಯವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಮನೆಮಾತಾಗಿದ್ದಾರೆ.
| ಜಾತಿವಾರು ವಿವರ |
| ಒಕ್ಕಲಿಗರು-1,34,000 |
| ಎಸ್ಸಿ-21,000 |
| ಎಸ್ಪಿ-10,000 |
| ಲಿಂಗಾಯತ-7,000 |
| ಕುರುಬ 7,000 |
| ಮುಸ್ಲಿಂ - 7,000 |
ತಾಲೂಕು ಪಂಚಾಯಿತಿ ಸದಸ್ಯರಾಗಿ, ಜಿಲ್ಲಾ ಪಂಚಾಯಿತಿ ಸದಸ್ಯ, ಅಧ್ಯಕ್ಷ , ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ , ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಸದ್ಯ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ಇವರ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಿದೆ.
ಕ್ಷೇತ್ರದಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಳ್ಳುವಲ್ಲಿ ಮೊದಲಿನಿಂದಲೂ ಹರಸಾಹಸ ಮಾಡುತ್ತಲೇ ಇದ್ದು, ಈ ಬಾರಿಯೂ ಅಂತಹ ಮತ್ತೊಂದು ಪ್ರಯತ್ನ ನಡೆಯುತ್ತಿದೆ. ಇದುವರೆಗಿನ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದವರಲ್ಲಿ ದಿ.ಎನ್.ಗಂಗಾಧರ್ ಅವರ ಗರಡಿಯಲ್ಲಿದ್ದ ಎಚ್.ಎಸ್.ಶ್ರೀಕಂಠಯ್ಯ 14 ಸಾವಿರ ಮತಗಳನ್ನು ಪಡೆದುಕೊಂಡಿದ್ದು ಬಿಟ್ಟರೆ ಇನ್ನಾರೂ ಆ ಸಂಖ್ಯೆಯನ್ನು ದಾಟಿಲ್ಲ. ಕಳೆದ ಬಾರಿಯಂತೂ ಬಿಜೆಪಿಯದ್ದು ಹೀನಾಯ ಸೋಲಾಗಿದ್ದು ಮತಗಳು 2 ಸಾವಿರದ ಗಡಿಯನ್ನೂ ದಾಟಲಿಲ್ಲವೆನ್ನುವುದು ತಾಲೂಕಿನಲ್ಲಿ ಪಕ್ಷ ಸಂಘಟನೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ.

ಹಾಸನ ಜಿಲ್ಲೆಯಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಮತಕ್ಷೇತ್ರ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ. ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಕ್ಷೇತ್ರ, ಮಾಜಿ ಸಚಿವ ಹೆಚ್.ಸಿ. ಶ್ರೀಕಂಠಯ್ಯನವರ ಮರಣದ ಬಳಿಕ ಜೆಡಿಎಸ್‌ನ ಭದ್ರಕೋಟೆಯಾಗಿ ರೂಪುಗೊಂಡಿದೆ. ಕಳೆದ ಐದು ಭಾರಿಯಿಂದಲೂ ಕ್ಷೇತ್ರವನ್ನು ಜೆಡಿಎಸ್ ಗೆಲ್ಲುತ್ತಾ ಬಂದಿದೆ. ಈಗಲೂ ಕ್ಷೇತ್ರ ಜೆಡಿಎಸ್ ವಶದಲ್ಲಿದ್ದು, ಸಿ.ಎನ್. ಬಾಲಕೃಷ್ಣ ಶಾಸಕರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಜೆಡಿಎಸ್‌ನಿಂದ ಅವರೇ ಸ್ಪರ್ಧಿಸಲಿದ್ದು, ಟಿಕೆಟ್ ಅವರಿಗೆ ಸಿಗುವುದು ಬಹುತೇಕ ಖಚಿತವಾಗಿದೆ. ಹಾಗಾಗಿಯೇ ಚುನಾವಣೆಗೆ ಭರ್ಜರಿ ತಯಾರಿ ಆರಂಭಗೊಂಡಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಯುತ್ತಿದ್ದು, ಮಾಜಿ ಸಚಿವ ಹೆಚ್.ಸಿ. ಶ್ರೀಕಂಠಯ್ತನವರ ಮೊಮ್ಮಗ ಲಲಿತ ರಾಘವ್ ಕೂಡಾ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಮಾಜಿ ಎಂಎಲ್ ಸಿ ಎಂ.ಎ. ಗೋಪಾಲಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೆಚ್ಚಾಗಿದೆ.
| ವರ್ಷ | ವಿಜೇತರು | ಮತಗಳು | ಸೋತವರು | ಮತಗಳು |
| 2008 | ಸಿ.ಎಸ್ ಪುಟ್ಟೇಗೌಡ (ಜೆಡಿಎಸ್) | 65,726 | ಎಚ್. ಸಿ ಶ್ರೀಕಂಠಯ್ಯ(ಕಾಂಗ್ರೆಸ್) | 56,280 |
| 2013 | ಸಿ.ಎನ್ ಬಾಲಕೃಷ್ಣ (ಜೆಡಿಎಸ್) | 87,185 | ಸಿ.ಎಸ್ ಪುಟ್ಟೇಗೌಡ (ಕಾಂಗ್ರೆಸ್) | 63,043 |
| 2018 | ಸಿ.ಎನ್ ಬಾಲಕೃಷ್ಣ (ಜೆಡಿಎಸ್) | 105,516 | ಸಿ.ಎಸ್ ಪುಟ್ಟೇಗೌಡ (ಕಾಂಗ್ರೆಸ್) | 52,504 |
ಸದ್ಯ ಜೆಡಿಎಸ್ ಪಕ್ಷದಿಂದ ಸಿ.ಎನ್. ಬಾಲಕೃಷ್ಣ ಪಕ್ಷದ ಜೊತೆಗೆ, ವೈಯಕ್ತಿಕ ವರ್ಚಸ್ಸನ್ನೂ ಹೆಚ್ಚಿಸಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿಯೂ ಗೆಲುವು ಅವರ ಮನೆ ಬಾಗಿಲ ಬಳಿ ನಿಂತಿದೆ ಎನ್ನುವುದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ಸತತ ಸೋಲು ಕಂಡಿರುವ ಕಾಂಗ್ರೆಸ್ ಕೂಡ ಈ ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ.
ಶ್ರವಣಬೆಳಗೊಳ ವಿಧಾನಸಭಾ ಚುನಾವಣಾ 2018ರ ಫಲಿತಾಂಶ
2018 ಚುನಾವಣೆಯಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸಿಎನ್ ಬಾಲಕೃಷ್ಣ ಸ್ಪರ್ಧಿಸಿದ್ದು, ಬರೋಬ್ಬರಿ 105,516 ಮತಗಳನ್ನು ಪಡೆದಿದ್ದರು. ಇನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸಿಎಸ್ ಪುಟ್ಟೇಗೌಡ 52,504 ಮತಗಳನ್ನು ಪಡೆದು 53,012 ಅಂತರದಲ್ಲಿ ಸೋಲು ಕಂಡಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications