Kalaburagi: ಮದುವೆ ಮಾಡಿಲ್ಲ ಎಂದು ಕುಡಿದ ನಶೆಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗ
ಕಲಬುರಗಿ, ಫೆ.05: ಜಗತ್ತಿನಲ್ಲಿ ತಾಯಿಗಿಂತ ದೇವರಿಲ್ಲ ಎಂಬ ಮಾತನ್ನು ಚಿಕ್ಕ ಮಕ್ಕಳಿದ್ದಾಗಿನಿಂದ ತಲೆಗೆ ತುಂಬಿಕೊಂಡು ಬಂದಿರುತ್ತೆವೆ. ಯಾವುದೇ ಕಾರಣಕ್ಕೂ ಆಕೆಯನ್ನು ನೋಯಿಸಬಾರದು ಎಂಬ ಮಾತನ್ನು ಹಿರಿಯರು, ಶಿಕ್ಷಕರು ಕಲಿಸಿಕೊಟ್ಟಿರುತ್ತಾರೆ. ಆದರೆ, ಮದ್ಯದ ನಶೆ ಎಲ್ಲವನ್ನೂ ಬುಡಮೇಲು ಮಾಡಿ, ಹೆತ್ತ ತಾಯಿಯನ್ನೇ ಕೊಲೆ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗಿರುವ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ.
ಹೌದು.... ಕುಡಿದ ನಶೆಯಲ್ಲಿದ್ದ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ತಿಂಗಳು ಒಡಲಲ್ಲಿ ಇಟ್ಟು ಹೆತ್ತ ಅಮ್ಮನನ್ನೇ ಕೊಲೆ ಮಾಡಿರುವ ದುರಂತ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಚಾವರಂನಲ್ಲಿ ವರದಿಯಾಗಿದೆ. ಮದ್ಯದ ನಶೆಯಲ್ಲಿ ಕಟ್ಟಿಗೆಯಿಂದ ತನ್ನ ತಾಯಿಯನ್ನೆ ಹತ್ಯೆ ಮಾಡಿದ್ದಾನೆ ಮಗ ಅನಿಲ್.

ಹೆತ್ತಮ್ಮನನ್ನು ಕೊಲೆ ಮಾಡಲು ಕಾರಣ ಮದುವೆ!
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಚಾವರಂನಲ್ಲಿ ವಾಸವಾಗಿದ್ದ 45 ವರ್ಷದ ಶೋಭಾ ಮತ್ತು ಅನಿಲ್ ಈ ದುರಂತ ಘಟನೆಗೆ ಸಾಕ್ಷಿಯಾದವರು. ಕುಡಿದು ಮನೆಗೆ ಬಂದಿದ್ದ ಮಗನನ್ನು ತಾಯಿ ಶೋಭಾ ಪ್ರಶ್ನೆ ಮಾಡಿದ್ದಾರೆ. ಮೊದಲೆ ಕುಡಿದು ತೂರಾಡುತ್ತಿದ್ದ ಮಗ ಅನಿಲ್ ತನ್ನ ಮದುವೆ ವಿಷಯವನ್ನು ಎಳೆದು ತಂದಿದ್ದಾನೆ.
ಇಷ್ಟು ವರ್ಷವಾದರೂ ತನಗೆ ಮದುವೆ ಮಾಡಿಲ್ಲ ಎಂದು ಜಗಳಕ್ಕೆ ನಿಂತಿದ್ದಾನೆ. ಮದುವೆ ವಿಷಯವನ್ನೆ ದೊಡ್ಡ ರಾದ್ಧಾಂತ ಮಾಡಿ ಅಲ್ಲೇ ಇದ್ದ ಕಟ್ಟಿಗೆ ತೆಗೆದು ತಾಯಿಗೆ ಬಡಿದು ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸರು ಕೊಲೆ ಮಾಡಿದ ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಕೊಂಚಾವರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.











Click it and Unblock the Notifications