ಯಡಿಯೂರಪ್ಪ ಜೈಲಿಗೆ ಹೋಗಿ ಬಂದು ಬಿದ್ದಾಗಿದೆ: ಸಿದ್ದರಾಮಯ್ಯ
ಕಲಬುರಗಿ, ಮೇ 1: 'ಯಡಿಯೂರಪ್ಪ ಅವರು ಈಗಾಗಲೇ ನೆಗೆದು ಬಿದ್ದಾಗಿದೆ. ಜೈಲಿಗೆ ಹೋಗಿ ಬಂದು ಬಿದ್ದಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಚುನಾವಣಾ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ ಅವರು, ಚುನಾವಣೆ ಬಳಿಕ ಕಾಂಗ್ರೆಸ್ ನೆಗೆದುಬೀಳಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಮೊದಲು ಯಾರು ನೆಗೆದುಬೀಳ್ತಾರೆ ನೋಡೋಣ. ನಾವ್ಯಾರೂ ನೆಗೆದುಬೀಳುವುದಿಲ್ಲ. ಜೈಲಿಗೆ ಹೋಗಿ ಬಂದಾಗಲೇ ಯಡಿಯೂರಪ್ಪ ನೆಗೆದುಬಿದ್ದಾಗಿದೆ. ಬೇರೆಯವರ ಬಗ್ಗೆ ಏನು ಮಾತನಾಡುತ್ತಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವಿಟ್ಟರ್‌ನಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಿ.ಎಸ್, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಕುರಿತು ಏಕವಚನದ ವಾಗ್ದಾಳಿ ನಡೆಸಿದ್ದರು.
'ಯಾವನ್ರಿ ಅವ್ನು ಸಿಎಂ, ಚಾಮುಂಡೇಶ್ವರಿ ಗೆಲ್ಲಲಾಗ್ದೆ ಇರೋನು ಪ್ರಧಾನಿಗೆ ಪ್ರಶ್ನೆ ಕೇಳ್ತಾನಾ?' ಎಂದು ಪ್ರಶ್ನಿಸಿದ್ದ ಯಡಿಯೂರಪ್ಪ, ಕಾಂಗ್ರೆಸ್ ಒಡೆದ ಮನೆಯಾಗಿದೆ. ಒಂಟಿಯಾಗಿ ತಿರುಗುತ್ತಿರುವ ಸಿದ್ದರಾಮಯ್ಯ ಅವರಿಗೆ ಮೋದಿ ಅವರನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಟೀಕಿಸಿದ್ದರು.












Click it and Unblock the Notifications