ಲಿಂಗಾಯತ ಧರ್ಮ ಹೋರಾಟ, ಕಾಂಗ್ರೆಸ್ ಸಚಿವರಿಗೆ ಟಾಂಗ್ ಕೊಟ್ಟ ಶಾಮನೂರು
ಕಲಬುರಗಿ, ಜನವರಿ 27 : ಕೆಲವು ಸಚಿವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಮಂತ್ರಿ ಸ್ಥಾನ ಹೋದ ಮೇಲೆ ಇವರನ್ನು ಯಾರೂ ಕೇಳುವುದಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಇಲ್ಲಿನ ಆಳಂದದಲ್ಲಿ ಮಾತನಾಡಿದ ಅವರು, ಆ ಮಂತ್ರಿಗಳಿಗೆ ದೇವರೇ ಒಳ್ಳೆ ಬುದ್ಧಿ ಕೊಡಬೇಕು. ಸಚಿವರು ಮೀರ್ ಸಾದಿಕ್ ಕೆಲಸ ಮಾಡುತ್ತಿರುವುದು ಮಾತ್ರ ಒಳ್ಳೆಯದಲ್ಲ ಎಂದು ಹೇಳಿದ ಅವರು, ಯಾರು ಪ್ರತ್ಯೇಕತೆ ಬಯಸುತ್ತಾರೋ ಅವರು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಸಭೆಗೆ ಕರೆದರೂ ಬಾರದೆ ಅವರೇ ಹೊರಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸದ್ಯ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರು ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ವಿನಯ ಕುಲಕರ್ಣಿ.

ಈಗ ಶಾಮನೂರು ಶಿವಶಂಕರಪ್ಪ ಅವರ ಮಾತುಗಳನ್ನು ಕೇಳುತ್ತಿದ್ದರೆ ಈ ಇಬ್ಬರು ಸಚಿವರಿಗೆ ಟಾಂಗ್ ನೀಡಿದಂತಿದೆ.












Click it and Unblock the Notifications