ಗುಜರಾತ್‌ನಲ್ಲಿ ಮೋದಿ ಅಲೆ ಮಕಾಡೆ ಮಲಗಿದೆ : ಖರ್ಗೆ

Posted By:
Subscribe to Oneindia Kannada

ಕಲಬುರಗಿ, ನವೆಂಬರ್ 29 : ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಗುಜರಾತ್ ನಲ್ಲಿ ಮೋದಿ ಅಲೆ ಮಕಾಡೆ ಮಲಗಿದೆ, ಈ ಬಾರಿ ಕಾಂಗ್ರೆಸ್ ನದ್ದೆ ವಿಜಯ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ಕಟು ಟೀಕೆ, ಹಿಂದುಳಿದ ವರ್ಗದ ದಾಳ ಉರುಳಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ನಿರ್ಣಯಗಳಿಂದ ಗುಜರಾತ್ ರಾಜ್ಯದ ಜನ ಬೇಸತ್ತಿದ್ದಾರೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

No Modi wave in Gujarat : Karge

ಗುಜರಾತ್‌ನಲ್ಲಿ ವ್ಯಾಪಾರಿಗಳು ನಮ್ಮ ರಾಜ್ಯದವರು ಪ್ರಧಾನಿ ಆಗುತ್ತಾರೆ ಎಂಬ ಕಾರಣಕ್ಕೆ ಮೋದಿಯನ್ನು ಬೆಂಬಲಿಸಿದ್ದರು. ಆದರೆ, ಮೋದಿ ಕೈಗೊಂಡ ನಿರ್ಣಯಗಳಿಂದ ಅವರು ಬೇಸತ್ತು ಹೋಗಿದ್ದಾರೆ. ಗುಜರಾತಿನಲ್ಲಿ ಈ ಭಾರಿ ಕಾಂಗ್ರೆಸ್ ಪಕ್ಷದ ಉತ್ತಮ ಅಲೆಯಿದ್ದು, ಮೋದಿ ವರ್ಚಸ್ಸು ಕಡಿಮೆ ಆಗಿದೆ ಎಂದರು.

ಪಕ್ಷಕ್ಕಾಗಿ ರಾಹುಲ್ ಗಾಂಧಿ ಶ್ರಮಪಟ್ಟು ದುಡಿಯುತ್ತಿದ್ದಾರೆ. ಮೋದಿಯ ತಪ್ಪು ನಿರ್ಣಯಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಬಿಜೆಪಿಗೆ ಕಠಿಣ ಸವಾಲು ಒಡ್ಡಲು ಕಾಂಗ್ರೆಸ್ ಸರ್ವ ಸನ್ನದ್ಧವಾಗಿದೆ ಎಂದು ಅವರು ಹೇಳಿದರು.

ಅನುಕಂಪ ಗಿಟ್ಟಿಸಲು ಮೋದಿಯಿಂದ ಬಡತನದ ಹೇಳಿಕೆ: ಮಲ್ಲಿಕಾರ್ಜುನ್ ಖರ್ಗೆ

ಇಡೀ ದೇಶವನ್ನು ಸರ್ವಾಧಿಕಾರಿಯಾಗಿ ನಡೆಸಬೇಕು ಎಂದು ಮೋದಿ ನಿರ್ಧರಿಸಿದ್ದಾರೆ. ಆದರೆ ಇದಕ್ಕೆ ಅವರ ಪಕ್ಷದಲ್ಲಿಯೇ ವಿರೋಧವಿದೆ ಎಂದು ಖರ್ಗೆ ತಿಳಿಸಿದರು.

'ನಾನು ಚಹಾ ಮಾರಿದ್ದೇನೆ ಹೊರತು ದೇಶವನ್ನಲ್ಲ' ಎಂಬ ಮೋದಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ ಅವರು, ' ಜನರ ಅನುಕಂಪ ಗಳಿಸಲು ಚಹಾ ಮಾರಿದ್ದಾಗಿ ಹೇಳುತ್ತಿದ್ದಾರೆ, ಹಾಗಾದರೆ, ಕಾಂಗ್ರೆಸ್ ದೇಶವನ್ನು ಮಾರಿದೆಯಾ? ಒಂದು ವೇಳೆ ನಾವು ದೇಶ ಮಾರಿದ್ದರೆ ಮೋದಿ ಪ್ರಧಾನಿ ಆಗುತ್ತಿದ್ದರಾ?, ರಾಕೆಟ್, ಉಪಗ್ರಹಗಳನ್ನು ಉಡಾಯಿಸುತ್ತಿದ್ದರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಒಬ್ಬರೇ
ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ ಎಂಬ ಹೇಳಿಕೆಗೆ, ಆರಂಭದಲ್ಲಿ ಸಂವಿಧಾನ ರಚನೆ ಸಮಿತಿಯಲ್ಲಿ ಎಂಟು ಜನ ಸದಸ್ಯರಿದ್ದರು. ಆದರೆ, ಎಲ್ಲಾ ಸದಸ್ಯರು ಸಮಿತಿಯನ್ನು ಬಿಟ್ಟು ಹೋಗಿದ್ದರು. ಆ ವೇಳೆ ಅಂಬೇಡ್ಕರ್ ಒಬ್ಬರೆ ಸಂವಿಧಾನ ರಚಿಸಿದ್ದರು. ಈ ಬಗ್ಗೆ ನಾನು ಸಂಸತ್‌ನಲ್ಲಿ ಸಂವಿಧಾನ ಸಂಭ್ರಮಾಚರಣೆ ದಿನ ಭಾಷಣ ಮಾಡಿದ್ದೆ. ನನ್ನ ಭಾಷಣವನ್ನು ಅವರು ಕೇಳಿಲ್ಲ ಅನಿಸುತ್ತದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MP Mallikarjun said "there is no Modi wave in gujarat, Congress will definitely win Gujarat elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ