Vande Bharat; ಕಲಬುರಗಿಗೆ ವಂದೇ ಭಾರತ್‌ ಸಂಸದರ ಮಾತು

ಕಲಬುರಗಿ, ಡಿಸೆಂಬರ್ 07; ಕರ್ನಾಟಕದಲ್ಲಿ ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು ಎಂಬುದು ಬೇಡಿಕೆಯಾಗಿದೆ. ಸದ್ಯ ರಾಜ್ಯದಲ್ಲಿ ಮೂರು ಮಾರ್ಗದಲ್ಲಿ ಈ ಮಾದರಿ ರೈಲುಗಳು ಸಂಚಾರ ನಡೆಸುತ್ತಿವೆ. ಕಲಬುರಗಿಗೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.

ಲೋಕಸಭೆಯಲ್ಲಿ ಸಹ ಕಲಬುರಗಿಗೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎನ್ನುವ ಬೇಡಿಕೆಯ ಬಗ್ಗೆ ಚರ್ಚೆಯಾಗಿದೆ. ಸಂಸದ ಡಾ ಉಮೇಶ್ ಜಾಧವ್ ಲೋಕಸಭೆ ಕಲಾಪದಲ್ಲಿ ಸಭಾಪತಿಗಳ ಮೂಲಕ ಈ ಕುರಿತು ರೈಲ್ವೆ ಸಚಿವರ ಗಮನ ಸೆಳೆದಿದ್ದಾರೆ.

MP Demand To Extend Mumbai Solapur Vande Bharat Train To Kalaburagi

ಸಂಸದರು ಮುಂಬೈ-ಸೋಲಾಪುರ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಕಲಬುರಗಿ ತನಕ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಬೈ೦-ಸೋಲಾಪುರ ನಡುವಿನ ರೈಲು ಸೇವೆಗೆ ಚಾಲನೆ ನೀಡಿದ್ದರು.

ಸಂಸದರ ಮನವಿ ಏನು?; ಕಲಬುರಗಿ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳ ಕೇಂದ್ರ ಸ್ಥಾನವಾಗಿದೆ. ಮಹಾರಾಷ್ಟ್ರದಲ್ಲಿ ಸಂಚಾರ ನಡೆಸುವ ಮುಂಬೈ-ಸೋಲಾಪುರ ನಡುವಿನ ವಂದೇ ಭಾರತ್ ರೈಲನ್ನು ಕಲಬುರಗಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ರೈಲು ಸೇವೆ ವಿಸ್ತರಣೆಗೊಂಡರೆ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಅಲ್ಲದೇ ವ್ಯಾಪಾರ ಅಭಿವೃದ್ಧಿಗೆ ಮತ್ತು ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ. ಪ್ರತಿ ದಿನ ಸುಮಾರು 10 ಸಾವಿರ ಜನರು ಮುಂಬೈಗೆ ಸಂಚಾರ ನಡೆಸುತ್ತಾರೆ. ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ಸಂಸದರು ವಿವರಣೆ ನೀಡಿದ್ದಾರೆ.

ಕಲಬುರಗಿಯಲ್ಲಿ ಪ್ರತ್ಯೇಕ ಪಿಟ್‌ಲೈನ್ ವ್ಯವಸ್ಥೆ ಇದೆ. ಅಲ್ಲದೇ ಗುಂತಕಲ್-ಬೆಂಗಳೂರು ನಡುವಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಆದ್ದರಿಂದ ವಂದೇ ಭಾರತ್ ರೈಲು ಓಡಿಸಲು ಬೇಕಾದ ಅಗತ್ಯ ಸೌಲಭ್ಯಗಳು ಕಲಬುರಗಿಯಲ್ಲಿ ಇವೆ ಎಂದು ಸಂಸದರು ರೈಲ್ವೆ ಸಚಿವರಿಗೆ ಮಾಹಿತಿಯನ್ನು ನೀಡಿದ್ದಾರೆ.

ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆಯೂ ಇದೆ. 19/7/2023ರಂದು ರೈಲ್ವೆ ಸಚಿವಾಲಯದ ಸಭೆಯಲ್ಲಿ ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲು ಓಡಿಸುವ ಕುರಿತು ಚರ್ಚೆ ನಡೆದಿತ್ತು. ಆಗ 10 ಮಾರ್ಗದಲ್ಲಿ ಹೊಸದಾಗಿ ವಂದೇ ಭಾರತ್ ಓಡಿಸಲು ಅನುಕೂಲವಾಗುವಂತೆ ಮೂಲ ಸೌಕರ್ಯ ಒದಗಿಸಲು ನೈಋತ್ಯ ರೈಲ್ವೆ ಹೇಳಿತ್ತು. ಈ 10 ಮಾರ್ಗದಲ್ಲಿ ಬೆಂಗಳೂರು-ಕಲಬುರಗಿ ಸೇರಿತ್ತು.

ಕರ್ನಾಟಕದಲ್ಲಿ ಸದ್ಯ ಮೈಸೂರು-ಬೆಂಗಳೂರು-ಚೆನ್ನೈ, ಕೆಎಸ್ಆರ್‌ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮತ್ತು ಯಶವಂತಪುರ ಕಾಚಿಗುಡ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಬೆಂಗಳೂರು-ಧಾರವಾಡ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವೂ ಪೂರ್ಣಗೊಂಡಿದೆ. ವಾಣಿಜ್ಯ ಸಂಚಾರಕ್ಕೆ ದಿನಾಂಕ ನಿಗದಿಯಾಗಬೇಕಿದೆ.

ಹೆಚ್ಚುವರಿ ರೈಲು; ಕರ್ನಾಟಕದ 4ನೇ ದೊಡ್ಡ ನಗರವಾಗಿರುವ ಕಲಬುರಗಿಗೆ ಬೆಂಗಳೂರಿನಿಂದ ಪ್ರತ್ಯೇಕ ರೈಲು ಇಲ್ಲ. ಪ್ರತಿದಿನ ಬೆಂಗಳೂರು-ಕಲಬುರಗಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆದ್ದರಿಂದ ಬೆಂಗಳೂರು-ಕಲಬುರಗಿ ನಡುವೆ ಹೆಚ್ಚುವರಿ ರೈಲು ಬೇಕು ಎಂದು ಹಿಂದಿನಿಂದಲೂ ಒತ್ತಾಯಿಸಲಾಗುತ್ತಿದೆ.

ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು-ಕಲಬುರಗಿ ನಡುವಿನ ರೈಲು ಭರ್ತಿಯಾದ ಫೋಟೋವನ್ನು ಹಾಕಿ ಉಭಯ ನಗರಗಳ ನಡುವೆ ಹೆಚ್ಚುವರಿ ರೈಲನ್ನು ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+