ಚಿಂಚೋಳಿ ಟಿಕೆಟ್ ರಾಜಕೀಯ,ಬಿಜೆಪಿ ಕಿಚಾಯಿಸಿದ ಖರ್ಗೆ ಪುತ್ರ
Recommended Video
ಬೆಂಗಳೂರು, ಏಪ್ರಿಲ್ 28: 'ಎಲ್ಲರಿಗೂ ಡಿಎನ್ಎ ಆಧಾರದ ಮೇಲೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದರೆ ಸರಿಯಾಗುವುದಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೀಡಿದ್ದ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಡಾ. ಉಮೇಶ್ ಜಾಧವ್ ಅವರು ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಕಣಕ್ಕಿಳಿದಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಚಿಂಚೋಳಿಯಲ್ಲಿ ಉಪಚುನಾವಣೆ ನಿಗದಿಯಾಗಿದೆ. ಇನ್ನು ಸಿಎಸ್ ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯಲಿದೆ.
ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಗೆ ಟಿಕೆಟ್ ನೀಡಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿಯಿಂದ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಡಾ.ಉಮೇಶ್ ಜಾಧವ್ ಅವರು ಬಿಜೆಪಿಯ ಸುನೀಲ್ ವಲ್ಯಾಪುರೆ ಅವರನ್ನು 19 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು. ಮೇ 19ರಂದು ಈ ಎರಡು ಕ್ಷೇತ್ರಗಳಿಗೂ ಮತದಾನ ನಡೆಯಲಿದ್ದು, ಮೇ 23ರಂದು ಲೋಕಸಭೆ ಚುನಾವಣೆ ಜೊತೆಗೆ ಉಪ ಚುನಾವಣೆ ಫಲಿತಾಂಶವೂ ಹೊರ ಬರಲಿದೆ.

ಕುಟುಂಬ ರಾಜಕೀಯದ ಬಗ್ಗೆ ಪ್ರಿಯಾಂಕ್ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಕಲಬುರಗಿ ದಕ್ಷಿಣದ ಶಾಸಕ, ಗುತ್ತೇದಾರರು, ಚಿಂಚನಸೂರು ಹಾಗೂ ಕುಟುಂಬ, ಆಳಂದ ಶಾಸಕ, ಸೇಡಂ ಶಾಸಕ ಹಾಗೂ ಸೋದರರ ಸಾಲಿಗೆ ಈಗ ಚಿಂಚೋಳಿಯವರು ಹೊಸ ಸೇರ್ಪಡೆ ಎಂದಿದ್ದಾರೆ. ಇದು ಒಂದು ರೀತಿ ಕುಡಿಕೆಯು ಕೆಟಲ್ ಕಪ್ಪು ಎಂದು ಜರೆದ ಹಾಗೆ ಆಗಿದೆ. ಕುಟುಂಬ ರಾಜಕೀಯ ಉಳಿಸಿ, ಬೆಳಸಿಕೊಂಡು ಬರುತ್ತಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರುವುದರಲ್ಲಿ ಅರ್ಥವಿಲ್ಲ ಎಂಡಿದ್ದಾರೆ.
|
ಬಿಜೆಪಿ ಕುಟುಂಬ ರಾಜಕೀಯ
ಕಲಬುರಗಿಯಲ್ಲಿ ಬಿಜೆಪಿಯ ಕುಟುಂಬ ರಾಜಕೀಯದ ಪಟ್ಟಿ ನೀಡಿ ಕಿಚಾಯಿಸಿದ ಸಚಿವ ಪ್ರಿಯಾಂಕ್ ಖರ್ಗೆ.
|
ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ
ಭಾರತೀಯ ಕಾಂಗ್ರೆಸ್ ನ ಅಧ್ಯಕ್ಷರಾಗಲು ಕಾಡ ಡಿಎನ್ಎ ಮುಖ್ಯ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿ, ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ.
|
ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿದ್ದ ಪ್ರಿಯಾಂಕ್
ಪ್ರಿಯಾಂಕ್ ಅವರು ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕನ್ನಡದಲ್ಲಿ ಮಾತನಾಡಿ, ಕರ್ನಾಟಕದ ಸಚಿವರು ನೀವು ಎಂದು ಬಿಜೆಪಿ ಬೆಂಬಲಿಗರಿಂದ ಟ್ವೀಟ್.
| Array |
ಕಲಬುರಗಿಯ ಕುಟುಂಬ ರಾಜಕೀಯ
ಕಲಬುರಗಿ ದಕ್ಷಿಣದ ಶಾಸಕ, ಗುತ್ತೇದಾರರು, ಚಿಂಚನಸೂರು ಹಾಗೂ ಕುಟುಂಬ, ಆಳಂದ ಶಾಸಕ, ಸೇಡಂ ಶಾಸಕ ಹಾಗೂ ಸೋದರರ ಸಾಲಿಗೆ ಈಗ ಚಿಂಚೋಳಿಯವರು ಹೊಸ ಸೇರ್ಪಡೆ

ಕುಂದಗೋಳದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ
ಕಾಂಗ್ರೆಸ್ಸಿನಿಂದ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಸುಭಾಷ್ ರಾಥೋಠ್ ಅವರು ಚಿಂಚೋಳಿಯಿಂದ ಹಾಗೂ ಕುಂದಗೋಳದಿಂದ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿಕರಾದ ಎಂಬಿ ಚಿಕ್ಕನಗೌಡರ್ ಅವರು ಕುಂದಗೋಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಪಕ್ಷದಿಂದ ಅಧಿಕೃತವಾಗಿ ಹೆಸರು ಘೋಷಣೆಯಾದ ಬಳಿಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಎಂಆರ್ ಪಾಟೀಲ್ ಅವರು ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದರು.












Click it and Unblock the Notifications