ಹಿಂದೂ-ಮುಸ್ಲಿಂ ವಿವಾಹಕ್ಕೆ ಸಾಕ್ಷಿಯಾದ ಕಲಬುರಗಿ ಮಹಿಳಾ ನಿಲಯ

ಕಲಬುರಗಿ, ಜೂನ್ 21 : ಕಲಬುರಗಿಯ ರಾಜ್ಯ ಮಹಿಳಾ ನಿಲಯ 18ನೇ ವಿವಾಹಕ್ಕೆ ಸಾಕ್ಷಿಯಾಗಿದೆ. ನಿಲಯದ ನಿವಾಸಿ ಶಬಾನಾ ಮತ್ತು ಬೀದರ್ ಜಿಲ್ಲೆಯ ನಿವಾಸಿ ವಿಕ್ರಮ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.

ಶಬಾನಾಳನ್ನು ಬೀದರ್ ಜಿಲ್ಲೆಯ ಮನ್ನಳ್ಳಿ ಗ್ರಾಮದ ವಿಕ್ರಮ ಎಂಬುವವರು ಜೂನ್ 21ರ ಗುರುವಾರ ಕನ್ಯಾಲಗ್ನದ ಶುಭ ಮಹೂರ್ತದಲ್ಲಿ ವಿವಾಹವಾದರು. ಶಬಾನಾಳನ್ನು ಸ್ವಇಚ್ಛೆಯಿಂದ ವಿವಾಹವಾಗಲು ವಿಕ್ರಮ ಒಪ್ಪಿಕೊಂಡಿದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರಳ ರೀತಿಯಲ್ಲಿ ವಿವಾಹ ಮಾಡಿಕೊಡಲಾಯಿತು.

ಕಲಬುರಗಿ ಜಿಲ್ಲಾ ಆಸ್ಪತ್ರೆಯಿಂದ ಶಬಾನಾಳನ್ನು7 ವರ್ಷದವಳಿದ್ದಾಗ ಜಿಲ್ಲೆಯ ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿತ್ತು. ನಂತರ 15ನೇ ವರ್ಷವಾದಾಗ ಯಾದಗಿರಿಯ ಬಾಲಕಿಯರ ಬಾಲಮಂದಿರಕ್ಕೆ ವರ್ಗಾಯಿಸಲಾಗಿತ್ತು.

Shabana

16ನೇ ವರ್ಷವಾದಾಗ ಶಬಾನಾಳನ್ನು ಪುನ: ಕಲಬುರಗಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿಕೊಳ್ಳಲಾಗಿತ್ತು. 21 ವರ್ಷದ ಶಬಾನಾ ಇಂದು ವಿವಾಹವಾಗಿದ್ದಾರೆ. ಪಿಯುಸಿ ವ್ಯಾಸಂಗ ಮಾಡಿರುವ ಅವರು, ಬ್ಯುಟಿಶಿಯನ್ ತರಬೇತಿ ಸಹ ಪಡೆದುಕೊಂಡಿದ್ದಾರೆ.

ಬೀದರ್ ಜಿಲ್ಲೆಯ ಮನ್ನಳ್ಳಿ ಗ್ರಾಮದ ಬ್ರಾಹ್ಮಣ ಕುಟುಂಬದ ವಿಮಲಾಬಾಯಿ ಮತ್ತು ವಿನಾಯಕರಾವ ಸಾವಜಿ ಅವರ ಪುತ್ರ ವಿಕ್ರಮ ಅವರು ಐಟಿಐ ಓದಿದ್ದಾರೆ. ಬೀದರ್‌ನಲ್ಲಿ ಹನಿ ನೀರಾವರಿ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದು, ಪ್ರತಿ ತಿಂಗಳು 25,000 ರೂ. ವೇತನ ಪಡೆಯುತ್ತಿದ್ದಾರೆ.

ಕಲಬುರಗಿ ರಾಜ್ಯ ಮಹಿಳಾ ನಿಲಯ 2005-06ರಿಂದ ಇದುವರೆಗೂ ಒಟ್ಟು 17 ವಿವಾಹಗಳಿಗೆ ಸಾಕ್ಷಿಯಾಗಿದೆ. ಶಬಾನಾ ಮತ್ತು ವಿಕ್ರಮ ನಿಲಯದಲ್ಲಿ ಸರಳವಾಗಿ ವಿವಾಹವಾದ 18ನೇ ಜೋಡಿಯಾಗಿದ್ದಾರೆ.

ಮಹಿಳಾ ನಿಲಯದಲ್ಲಿ ಮದುವೆಯಾದವರೆಲ್ಲ ಹೆಚ್ಚಾಗಿ ತಂದೆ ತಾಯಿಯಿಲ್ಲದವರು. ಮದುವೆಯಾದ ಬಳಿಕ ಎಲ್ಲರೂ ಸುಖ ಸಂತೋಷದಿಂದ ಬಾಳುತ್ತಿದ್ದಾರೆ. ನಿಲಯದ ನಿವಾಸಿಗಳ ಮದುವೆಯ ಬಳಿಕ ಮೂರು ವರ್ಷದವರೆಗೆ ಅವರ ಜೊತೆ ನಿರಂತರ ಸಂಪರ್ಕವನ್ನು ನಿಲಯ ಇಟ್ಟುಕೊಳ್ಳುತ್ತದೆ.

ವಿವಾಹಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಒಟ್ಟು 25,000ರೂ. ಒದಗಿಸಲಾಗಿದ್ದು, ಈ ಪೈಕಿ 5000 ರೂ. ಮದುವೆಗಾಗಿ ಖರ್ಚು ಮಾಡಲಾಗಿದೆ. ಉಳಿದ 20,000 ರೂ. ಹಣವನ್ನು ದಂಪತಿಗಳ ಹೆಸರಿನಲ್ಲಿ ಮೂರು ವರ್ಷಕ್ಕಾಗಿ ಫಿಕ್ಸ್ ಡಿಪಾಜಿಟ್ ಮಾಡಲಾಗುತ್ತದೆ.

ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ವಿಜಯಲಕ್ಷ್ಮೀ, ಶಿಶು ಗೃಹದ ಅಧೀಕ್ಷಕಿ ಶಿಲ್ಪಾ ಮತ್ತಿತರ ಅಧಿಕಾರಿಗಳು ಮತ್ತು ನಿಲಯದ ಸಿಬ್ಬಂದಿಗಳು ನವಜೋಡಿಗೆ ಆಶೀರ್ವಾದ ಮಾಡಿದರು. ಮದುವೆಗಾಗಿ ಸಾಯಿ ಪ್ರೆಸ್ಸಿಡೆನ್ಸಿ ಡಿಗ್ರಿ ಕಾಲೇಜಿನ ಕೌಶಿಕ ಜಿ.ಕೆ. ಅವರು ಬಾಂಡೆ ಸಾಮಾನುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+