ಕಲಬುರಗಿ ಪೊಲೀಸ್ ಭರ್ಜರಿ ಬೇಟೆ, ನಾಡಪಿಸ್ತೂಲ್ ಜಾಲ ಪತ್ತೆ

Posted By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಡಿಸೆಂಬರ್ 4: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಕ್ರಮ ನಾಡ ಪಿಸ್ತೂಲ್ ಜಾಲವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?

ಜಿಲ್ಲೆಯಲ್ಲಿ ನಾಡ ಪಿಸ್ತೂಲ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಹಾಗಾಗ ನಾಡ ಪಿಸ್ತೂಲ್ ನಿಂದ ಗುಂಡಿನ ಸದ್ದುಗಳು ಕೇಳಿಬರುತ್ತಿದ್ದವು. ಇದರಿಂದ ಹೆಚ್ಚತ್ತು ಒಂದು ಜಾಲವನ್ನು ಹಿಡಿದು ಕಾರ್ಯಚರಣೆಗಿಳಿದ ಕಲಬುರಗಿ ಪೊಲೀಸರು ಎಂಟು ಜನರನ್ನು ಬಂಧಿಸಿ, 20 ನಾಡ ಪಿಸ್ತೂಲ್ ಹಾಗೂ 40 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

 Kalaburagi police busts gun selling racket, 8 arrested

ಜಿಲ್ಲೆಯ ನೆಲೋಗಿ ಪೋಲಿಸ್ ಠಾಣೆ ವ್ಯಾಪ್ತಿ 3 ಕಂಟ್ರಿಮೇಡ್ ಪಿಸ್ತೂಲ್, 8 ಜೀವಂತ ಗುಂಡುಗಳು, ಅಫಜಲಪುರ ಠಾಣೆ 5 ನಾಡ ಪಿಸ್ತೂಲ್, 15 ಜೀವಂತ ಗುಂಡುಗಳು, ದೇವಲ ಗಾಣಾಗಾಪೂರದಲ್ಲಿ 4 ಕಂಟ್ರಿಮೇಡ್ ಪಿಸ್ತೂಲ್, 8 ಜೀವಂತ ಗುಂಡುಗಳು, ರಾಘವೇಂದ್ರ ನಗರ ಠಾಣೆ 2 ನಾಡ ಪಿಸ್ತೂಲ್, 6 ಜೀವಂತ ಗುಂಡುಗಳು, ಸ್ಟೇಷನ್ ಬಜಾರ ಠಾಣೆ 1 ರಿವಾಲ್ವಾರ್, 1 ನಾಡ ಪಿಸ್ತೂಲ್, 7 ಜೀವಂತ ಗುಂಡುಗಳು ಸಿಕ್ಕಿವೆ.

ಇವುಗಳೆಲ್ಲ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶನಿಂದ ಸರಬರಾಜು ಆಗುತ್ತಿದೆ. ಬಂಧಿತರೆಲ್ಲರು ಜನರಲ್ಲಿ ಭಯ ಹುಟ್ಡಿಸುವ ವಾತಾವರಣ ಸೃಷ್ಡಿ ಮಾಡಿದ್ದರು.

 Kalaburagi police busts gun selling racket, 8 arrested

ಕಲಬುರಗಿ ಮತ್ತು ಈಶಾನ್ಯ ವಲಯದ ಐಜಿಪಿ ವಲಯದಲ್ಲಿ ಉತ್ತಮ ಕಾರ್ಯಾಚರಣೆ ಮಾಡಿದ್ದವರಿಗೆ ಸೂಕ್ತ ಬಹುಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಈಶಾನ್ಯ ವಲಯ ಐಜಿಪಿ ಅಲೋಕ ಕುಮಾರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major breakthrough, Kalaburagi police on Monday busted an illegal gun racket in the district and arrested 8 persons. police seized total 20 contry weapons and 40 live bullets in various police station.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ