ಕೊರೊನಾ ರೋಗಿಗಳಿಗೆ ಕಳಪೆ ಊಟ: ಗರಂ ಆದ ಸಂಸದ
ಕಲಬುರಗಿ, ಏಪ್ರಿಲ್ 25: ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಕಲಬುರಗಿಯ ಆಸ್ಪತ್ರೆ ಮತ್ತು ಕ್ವಾರಂಟೈನ್‍ನಲ್ಲಿ ಊಟ ಸರಿಯಾಗಿ ನೀಡುತ್ತಿಲ್ಲ ಎಂಬ ಕೆಲವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಗುಣಮಟ್ಟದ ಊಟವನ್ನು ಸರಿಯಾದ ಪ್ರಮಾಣದಲ್ಲಿಯೆ ವಿತರಣೆ ಮಾಡುತ್ತಿದೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದ್ದಾರೆ.
ಕೋವಿಡ್-19 ಆಸ್ಪತ್ರೆ ಮತ್ತು ಕ್ವಾರಂಟೈನ್‍ನಲ್ಲಿ ಊಟ ಸರಿಯಾಗಿ ನೀಡುತ್ತಿಲ್ಲ ಎಂದು ಕೆಲವರ ಆರೋಪದ ಹಿನ್ನೆಲೆಯಲ್ಲಿ ತಾವು ಸ್ವತ ರೋಗಿಗಳಿಗೆ ನೀಡುವ ಊಟವನ್ನು ತರಿಸಿಕೊಂಡು ಮಾಡಿದ್ದು, ಎಲ್ಲವು ಸರಿಯಾಗಿದೆ ಎಂದು ಸಂಸದರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವರು ಅನಗತ್ಯವಾಗಿ ಈ ಕುರಿತು ಆಸ್ಪತ್ರೆಗಳ ಸಿಬ್ಬಂದಿಗಳ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರದ ನಿರ್ದೇಶನದಂತೆ ರೋಗಿಗಳಿಗೆ ಜಿಲ್ಲಾಡಳಿತವು ಮುಂಜಾನೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಒದಗಿಸುತ್ತಿದೆ ಎಂದಿದ್ದಾರೆ.

ಕೋವಿಡ್-19 ಪರೀಕ್ಷೆ ಕೈಗೊಳ್ಳುತ್ತಿರುವ ಕಲಬುರಗಿ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿ ಅಂತಿಮವಾಗಿದ್ದು, ದೃಢೀಕರಣಕ್ಕಾಗಿ ಬೆಂಗಳೂರು ಅಥವಾ ಪುಣೆ ಕಳುಹಿಸುವ ಅಗತ್ಯವಿಲ್ಲ. ಕಲಬುರಗಿ ಪ್ರಯೋಗಾಲಯ ಆರಂಭವಾದ ನಂತರ ಶಿಷ್ಠಚಾರದ ಪ್ರಕಾರ ಬೆಂಗಳೂರು ಅಥವಾ ಪುಣೆಗೆ ಕಳುಹಿಸಲಾಗುತಿತ್ತು. ಇದೀಗ ಈ ಪ್ರಯೋಗಾಲಯವನ್ನು ಉನ್ನತ್ತೀಕರಿಸಿರುವುದರಿಂದ ದೃಡೀಕರಣಕ್ಕಾಗಿ ಬೇರೆ ಪ್ರಯೋಗಾಲಕ್ಕೆ ವರದಿ ಕಳುಹಿಸುವ ಅಗತ್ಯವಿಲ್ಲ. ಇನ್ನೂ ಕೋವಿಡ್-19 ಪರೀಕ್ಷೆಗೆ ಅಗತ್ಯ ಪ್ರಮಾಣದಲ್ಲಿ ಕೆಮಿಕಲ್ ಸಹ ಲಭ್ಯವಿದೆ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದ್ದಾರೆ.












Click it and Unblock the Notifications