ನ. 22ರಿಂದ ಕಲಬುರಗಿ-ಬೆಂಗಳೂರು ವಿಮಾನ, ವೇಳಾಪಟ್ಟಿ

ಕಲಬುರಗಿ, ನವೆಂಬರ್ 14 : ಕಲಬುರಗಿ ಜನರ ದಶಕಗಳ ಕನಸು ನನಸಾಗುತ್ತಿದೆ. ನವೆಂಬರ್ 22ರಿಂದ ಕಲಬುರಗಿ-ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಗುತ್ತಿದೆ. 175.57 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ.

ಸ್ಟಾರ್ ಏರ್ ಸಂಸ್ಥೆಯ ವಿಮಾನ ನವೆಂಬರ್ 22ರಿಂದ ಕಲಬುರಗಿ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಕಲಬುರಗಿಯಿಂದ ಹಾರಾಟ ನಡೆಸಲಿರುವ ಮೊದಲ ವಿಮಾನ ಇದಾಗಿದೆ. ಇಂಡಿಗೋ ಏರ್‌ ಲೈನ್ಸ್ ಸಹ ಶೀಘ್ರದಲ್ಲಿಯೇ ಬೆಂಗಳೂರು-ಕಲಬುರಗಿ ನಡುವೆ ವಿಮಾನವನ್ನು ಆರಂಭಿಸಲಿದೆ.

ಉಭಯ ನಗರಗಳ ನಡುವಿನ ಪ್ರಯಾಣದ ಮೂಲ ಬೆಲೆ 2800 ರೂ. ಆಗಿದೆ. ಟಿಕೆಟ್ ಬೇಡಿಕೆ ಹೆಚ್ಚಿದರೆ ಡೈನಾಮಿಕ್ ಪ್ರೈಸಿಂಗ್ ಹೆಚ್ಚಳವಾಗಲಿದೆ. ನವೆಂಬರ್ 22ರಂದು ಹಾರಾಟ ನಡೆಸುವ ವಿಮಾನದಲ್ಲಿ ಸದ್ಯ ಎರಡು ಸೀಟುಗಳು ಮಾತ್ರ ಖಾಲಿ ಇದೆ.

Kalaburagi Bengaluru Flight Service Schedule

ವೇಳಾಪಟ್ಟಿ : ಸ್ಟಾರ್ ಏರ್ ಸಂಸ್ಥೆಯ ವಿಮಾನ ಬೆಂಗಳೂರಿನಿಂದ 12.20ಕ್ಕೆ ಹೊರಡಲಿದೆ. 1.25ಕ್ಕೆ ಕಲಬುರಗಿಗೆ ಬಂದು ತಲುಪಲಿದೆ. ಕಲಬುರಗಿಯಿಂದ 1.55ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ.

ಶೀಘ್ರವೇ ವಿಮಾನ ಸೇವೆ : ಕಲಬುರಗಿ-ಬೆಂಗಳೂರು ನಡುವೆ ಇಂಡಿಗೋ ಏರ್ ಲೈನ್ಸ್‌ ಕೂಡಾ ವಿಮಾನ ಸೇವೆಯನ್ನು ಆರಂಭಿಸಲಿದೆ. ಬಳಿಕ ದೆಹಲಿ, ತಿರುಪತಿಗೆ ವಿಮಾನ ಹಾರಾಟ ಆರಂಭವಾಗಲಿದೆ.

ಸ್ಟಾರ್ ಏರ್ ಬೆಂಗಳೂರು-ಕಲಬುರಗಿ-ತಿರುಪತಿ ನಡುವೆ ಶೀಘ್ರದಲ್ಲಿಯೇ ವಿಮಾನ ಸೇವೆಯನ್ನು ಆರಂಭಿಸಲಿದೆ. ಉಡಾನ್ ಯೋಜನೆ- 3ರಡಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆಗೊಂಡಿದೆ.

ಕರ್ನಾಟಕ ಸರ್ಕಾರವೇ 175.57 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿತ್ತು. ಒಟ್ಟು 742.23 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವಿದೆ. ಏರ್ ಬಸ್‌ನಂತಹ ಬೃಹತ್ ವಿಮಾನಗಳು ಬಂದಿಳಿಯಲು ಅನುಕೂಲವಾಗುವಂತೆ ರನ್ ವೇ ನಿರ್ಮಾಣ ಮಾಡಲಾಗಿದೆ.

2018ರ ಆಗಸ್ಟ್ 26ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿತ್ತು. 2019ರ ನವೆಂಬರ್ 1ರಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+