ತಬ್ಲೀಗ್ ಜಮಾತ್ : ಕಲಬುರಗಿಯಲ್ಲಿ 14 ಜನರಿಗೆ ಹೋಂ ಕ್ವಾರಂಟೈನ್

ಕಲಬುರಗಿ, ಏಪ್ರಿಲ್ 01 : ದೆಹಲಿಯ ನಿಜಾಮುದ್ದೀನ್‍ನಲ್ಲಿ ಇತ್ತೀಚೆಗೆ ಜರುಗಿದ ತಬ್ಲೀಗ್ ಮಾರ್ಕಾಜ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಕಲಬುರಗಿಯ 14 ಜನರನ್ನು ಪತ್ತೆ ಹಚ್ಚಲಾಗಿದೆ. ಅವರನ್ನು ಮುಂಜಾಗ್ರತವಾಗಿ ಗೃಹ ಬಂಧನದಲ್ಲಿರಿಸಿ ತೀವ್ರ ನಿಗಾ ವಹಿಸಲಾಗಿದೆ.

Recommended Video

      ಲಾಕ್ ಡೌನ್ ಆದೇಶದವರೆಗೆ ರಾಜ್ಯದಲ್ಲಿ ಉಚಿತ ಹಾಲು ಪೂರೈಕೆಗೆ BSY ಸೂಚನೆ | Free Milk | KMF | Bangalore

      ಜಿಲ್ಲಾಧಿಕಾರಿ ಶರತ್ ಬಿ. ಈ ಕುರಿತು ಮಾಹಿತಿ ನೀಡಿದ್ದಾರೆ. "ತಬ್ಲೀಗ್ ಮಾರ್ಕಾಜ್ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲೆಯಿಂದ 26 ಜನ ಭಾಗವಹಿಸಿದ್ದಾರೆ ಎಂಬುದ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಇದರಲ್ಲಿ ಜಿಲ್ಲೆಗೆ ವಾಪಸ್ಸಾದ 14 ಜನರನ್ನು ಗೃಹ ಬಂಧನದಲ್ಲಿಇರಿಸಲಾಗಿದೆ" ಎಂದರು.

      "6 ಜನ ಕರ್ನಾಟಕ್ಕಕ್ಕೆ ಇನ್ನೂ ಹಿಂದಿರುಗಿಲ್ಲ. 3 ಜನ ರಾಜ್ಯದ ಇತರೆ ಜಿಲ್ಲೆಯಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.

      Home Quarantine For 14 People Who Attend Tablighi Congregation

      "ಕೊರೊನಾ ಸೋಂಕಿನಿಂದ ಈಗಾಗಲೇ ಕಲಬುರಗಿಯ ಓರ್ವ ವ್ಯಕ್ತಿ ನಿಧನ ಹೊಂದಿದ್ದಾನೆ. ಈ ಸಾಂಕ್ರಾಮಿಕ ರೋಗದ ಪರಿಣಾಮವನ್ನು ಜನರು ಅಂದಾಜಿಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾರ್ಥನಾ ಸಭೆಗೆ ಹೋಗಿರುವ ಜಿಲ್ಲೆಯ ಜನರು ಸ್ವಯಂಪ್ರೇರಿತರಾಗಿ ಬಂದು ಮಾಹಿತಿ ನೀಡಬೇಕು" ಎಂದು ಕರೆ ನೀಡಿದರು.

      "ಕಲಬುರಗಿಯಲ್ಲಿ ಕೊರೋನಾ ಪಾಸಿಟಿವ್ ಬರುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಸಂಭ್ರಮದ ರೀತಿಯಲ್ಲಿ ಸುದ್ದಿಗಳು ಬರುತ್ತಿದ್ದು, ಇದು ಸಂಭ್ರಮದ ಸಮಯವಲ್ಲ. ರಾಜ್ಯದ ಇತರೆ ಜಿಲ್ಲೆಯಲ್ಲಿ ಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜಿಲ್ಲೆಯ ಜನರಾದ ನಾವು ತುಂಬಾ ಜಾಗ್ರತೆ ವಹಿಸಬೇಕಿದೆ" ಎಂದರು.

      "ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೆಲವು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗುತ್ತಿದೆ. ರೆಡ್ ಝೋನ್‍ನಲ್ಲಿ ಕಲಬುರಗಿ ಜಿಲ್ಲೆ ಸೇರಬಾರದು" ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+