ಕಲಬುರಗಿ: ಘತ್ತರಗಿ ಭಾಗಮ್ಮ ಉತ್ಸವಕ್ಕೆ ಚಾಲನೆ

Posted By:
Subscribe to Oneindia Kannada

ಕಲಬುರಗಿ, ಆಗಸ್ಟ್ 01: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಹಮ್ಮಿಕೊಳ್ಳಲಾದ ಘತ್ತರಗಿ ಉತ್ಸವ ಹಾಗೂ ಸುಮಾರು 3.69 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಜರಾಯಿ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.

ಧಾರ್ಮಿಕ ಕ್ಷೇತ್ರಗಳ ಮಹಿಮೆಯನ್ನು ಪ್ರೋತ್ಸಾಹದಾಯಕಗೊಳಿಸಿದರೆ ಎಲ್ಲರೂ ಈ ಕ್ಷೇತ್ರಗಳತ್ತ ಆಕರ್ಷಿಸುವರು ಎಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು. [ಟೊಮ್ಯಾಟೋ ಬೆಳೆದ ಕಲಬುರಗಿ ರೈತನ ಕಥೆ]

ಘತ್ತರಗಾದ ಭಾಗ್ಯವಂತಿ ದೇವಿಯತ್ತಲೂ ಸಹ ಜನರು ಆಕರ್ಷಿತರಾಗಿ ಈ ಕ್ಷೇತ್ರವೂ ಶಿರಡಿ, ತಿರುಪತಿಯಂತೆಯೇ ಯಾತ್ರಾಸ್ಥಳವಾಗಿ ಅಭಿವೃದ್ಧಿಗೊಳ್ಳಲಿದೆ. ಘತ್ತರಗಾ ದೇವಸ್ಥಾನದಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿಸಿದ ಸಚಿವರು ರಾಜ್ಯದ ಇತರ ದೇವಾಲಯಗಳಲ್ಲೂ ಈ ಮಾದರಿಯ ಅಭಿವೃದ್ಧಿ ಕಾರ್ಯಗಳನ್ನು ಅನುಕರಣೆ ಮಾಡುವಂತೆ ನಿರ್ದೇಶನ ನೀಡಲಾಗುವುದು ಎಂದರು.

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ಬಡವರ ಹಿತಾಸಕ್ತಿಗಾಗಿ ಅನೇಕ ಜನಪರ ಯೋಜನೆ ಜಾರಿಗೊಳಿಸಿದೆ. ಇನ್ನೆರಡು ವರ್ಷಗಳಲ್ಲಿ ಕಲಬುರಗಿ ಜಿಲ್ಲೆಗೆ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ ಮಾತನಾಡಿ, ಘತ್ತರಗಾಕ್ಕೆ ಹೆಚ್ಚು ಯಾತ್ರಿಕರು ಬರುವುದರಿಂದ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಯತ್ನಿಸುವುದಾಗಿ ಹೇಳಿದರು.

ಶಾಸಕ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ

ಶಾಸಕ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಭೀಮಾಶಂಕರ ಅವರನ್ನು ಘತ್ತರಗಾ ಮತ್ತು ದೇವಲ ಗಾಣಗಾಪುರ ಕ್ಷೇತ್ರಗಳ ನೋಡಲ್ ಅಧಿಕಾರಿಯಾಗಿ ನಿಯೋಜಿಸಬೇಕೆಂದು ಮುಜರಾಯಿ ಸಚಿವರನ್ನು ಕೋರಿದರು.

ನಮ್ಮ ಆಚಾರ-ವಿಚಾರ ಪರಿಶುದ್ಧವಾಗಿಟ್ಟುಕೊಂಡು ಧರ್ಮಪಾಲನೆ ಮಾಡಬೇಕು. ಈ ವರ್ಷದ ಆಯವ್ಯಯದಲ್ಲಿ ಮುಜರಾಯಿ ಇಲಾಖೆಗೆ ನೀಡಿದ ಅನುದಾನದಿಂದ ಕೈಗೊಳ್ಳಲಾಗುವ ದೇವಸ್ಥಾನಗಳ ಅಭಿವೃದ್ಧಿಯಲ್ಲಿ ದೇವಲ ಗಾಣಗಾಪುರವೂ ಸೇರಿದ್ದು, ನಿಗದಿತ ಅನುದಾನ ಬಿಡುಗಡೆ ಮಾಡಬೇಕೆಂದರು.

ಚಿತ್ರದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್

ಚಿತ್ರದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್

ಸೇಡಂ ಸಹಾಯಕ ಆಯುಕ್ತ ಹಾಗೂ ಭಾಗ್ಯವಂತಿ ದೇವಸ್ಥಾನದ ಆಡಳಿತಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾಗ್ಯವಂತಿ ದೇವಸ್ಥಾನದಿಂದ ಕೈಗೊಳ್ಳಲಾದ 3.69 ಕೋಟಿ ರೂ. ವೆಚ್ಚದ 20 ಕಾಮಗಾರಿಗಳಲ್ಲಿ ಅನ್ನ ದಾಸೋಹ, ಯಾತ್ರಿ ನಿವಾಸ, ಮಹಾದ್ವಾರ, ಸಿ.ಸಿ. ರಸ್ತೆ, ವಿ.ಐ.ಪಿ. ಅತಿಥಿ ಗೃಹ, ಪಿ.ಆರ್.ಓ. ಕಚೇರಿ, ಆಡಳಿತಾಧಿಕಾರಿ ಕಚೇರಿ, ಶೌಚಾಲಯ ಮುಂತಾದವುಗಳಿವೆ ಎಂದರು. ಸಿದ್ದು ಬಾಣರ್ ಸ್ವಾಗತಿಸಿದರು.

ಸಮಾರಂಭದಲ್ಲಿ ಅನೇಕ ಪಾಲ್ಗೊಂಡಿದ್ದರು

ಸಮಾರಂಭದಲ್ಲಿ ಅನೇಕ ಪಾಲ್ಗೊಂಡಿದ್ದರು

ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಚನ್ನಮಲ್ಲೇಶ್ವರ ಶಿವಾಚಾರ್ಯ ಮತ್ತು ಶಿವರಾಜೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದ ಈ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಎ.ಪಿ.ಎಂ.ಸಿ. ಅಧ್ಯಕ್ಷ ಬಸವಣ್ಣೆಪ್ಪ ಪಾಟೀಲ್ ಅಂಕಲಗಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರತನವ್ವ ಆರ್. ಬೀರಣ ಕಲ್ಲೂರ, ತಾಲೂಕು ಪಂಚಾಯಿತಿ ಅಧ್ಯಕ್ಷೆ ರಕ್ಮೀಣಿಬಾಯಿ ಜಮಾದಾರ್, ಸದಸ್ಯ ವಿಠ್ಠಲ ನಾಟೀಕಾರ್, ಭಾಗ್ಯವಂತಿ ಮೂರ್ತಿಗೆ 5 ಲಕ್ಷ ರೂ. ದೇಣಿಗೆ ನೀಡಿದ ತಿಪ್ಪಣ್ಣಪ್ಪ ಕಮಕನೂರ ಮತ್ತಿತರರು ಪಾಲ್ಗೊಂಡಿದ್ದರು.

ಘತ್ತರಗಿ ಭಾಗ್ಯವತಿ ದೇವಿ ದರ್ಶನಕ್ಕೆ ದಾರಿ

ಘತ್ತರಗಿ ಭಾಗ್ಯವತಿ ದೇವಿ ದರ್ಶನಕ್ಕೆ ದಾರಿ

* ಕಲಬುರಗಿಯಿಂದ ಚೌಡಪೂರ್ ಹೋಗಿ ಅಲ್ಲಿಂದ ಅಫ್ಜಲ್ ಪುರ ತಲುಪಬಹುದು. ಅಲ್ಲಿಂದ ಘತ್ತರಗಿ ಹೋಗಬಹುದು ಸುಮಾರು 81 ಕೀ.ಮೀ ಆಗುತ್ತದೆ. ಸರ್ಕಾರಿ ಹಾಗೂ ಖಾಸಗಿ ವಾಹನಗಳು ಲಭ್ಯ.

* ಕಲಬುರಗಿಯಿಂದ ಚೌಡಪೂರ್ ಹೋಗಿ ಅಲ್ಲಿಂದ ದೇವಗಲ್ ಗಾಣಗಾಪುರಕ್ಕೆ ಹೋಗಿ ದತ್ತಾತ್ರೇಯ ಸನ್ನಿಧಿಯನ್ನು ನೋಡಿಕೊಂಡು ನಂತರ ಘತ್ತರಗಿದ ಘತ್ತರಗಿ ಹೋಗಬಹುದು. ಇದು ಸಮೀಪ ಮತ್ತು ಉತ್ತಮ ರಸ್ತೆ ಹೊಂದಿರುವ ಮಾರ್ಗವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mujarai minister Rudrappa Lamani inaugurated the Ghattaragi Bhagamma Devi festival at Afzalpur taluk in Kalaburagi district and said government has sanctioned Rs 3.69 Cr for various development activities in the taluk.
Please Wait while comments are loading...