ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವಿದ್ಯಾಧರ ಗುರೂಜಿ ನಿಧನ

Posted By:
Subscribe to Oneindia Kannada

ಕಲಬುರಗಿ, ಜುಲೈ 30 : ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವಿದ್ಯಾಧರ ಗುರೂಜಿ (105) ಅವರು ಶನಿವಾರ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಶುಕ್ರವಾರ ಮಾಜಿ ಸಿಎಂ ಧರಂ ಸಿಂಗ್ ಅವರ ಅಂತಿಮ ದರ್ಶನ ಪಡೆದು ಹಿಂದಿರುಗುತ್ತಿರುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 8 ಗಂಟೆ ಕೊನೆಯುಸಿರೆಳೆದರು.

Freedom fighter Vidyadhar Guruji passes away in Kalaburagi

ಭಾನುವಾರ ಬೆಳಗ್ಗೆ ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ಕಲ್ಪಿಸಲಾಗಿದೆ. ಬಳಿಕ ವಿದ್ಯಾಧರ ಗುರೂಜಿಯವರ ಆಸೆಯಂತೆ ಅವರ ದೇಹವನ್ನು ಕಲಬುರಗಿಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

Karnataka Traffic police gets umbrellas, sunglasses to beat hot weather

ವಿದ್ಯಾಧರ ಗುರೂಜಿ ಅವರು 1914 ಡಿಸೆಂಬರ್ 30ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಸಾಯಬಣ್ಣ ಮತ್ತು ಭೀಮಕ್ಕ ದಂಪತಿಯ ಪುತ್ರರಾಗಿ ಜನಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Freedom fighter Vidyadhar Guruji (105) passes away in Kalaburagi Jayadeva institute of cardiology hospital on Saturday.
Please Wait while comments are loading...