ಮಾಜಿ ಬೆಂಬಲಿಗ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಚಿಂಚೋಳಿ, ಮೇ 10: ಮಾಜಿ ಬೆಂಬಲಿಗ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದಿರುವ ಸಿದ್ದರಾಮಯ್ಯ, ಉಮೇಶ್ ಜಾಧವ್ ಒಬ್ಬ ಗೋಮುಖ ವ್ಯಾಘ್ರ ಎಂದು ಜರಿದಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉಮೇಶ್ ಜಾಧವ್ ಸಂಭಾವಿತ ವ್ಯಕ್ತಿ ಎಂದುಕೊಂಡಿದ್ದೆ ಆದರೆ ಆತ ಗೋಮುಖ ವ್ಯಾಘ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕನಾಗಿದ್ದ ಜಾಧವ್ ಯಾಕೆ ರಾಜೀನಾಮೆ ಕೊಟ್ಟಿದ್ದಾನೊ ಇವತ್ತಿಗೂ ನಂಗೆ ತಿಳಿದಿಲ್ಲ, ನಿಮಗೇನಾದರೂ ಹೇಳಿದ್ದಾರಾ? ಅಂತಾ ಸಿದ್ದರಾಮಯ್ಯ ಸಭೆಯಲ್ಲಿದ್ದ ಜನರನ್ನ ಪ್ರಶ್ನಿಸಿದರು. ಕಾಂಗ್ರೆಸ್ನಲ್ಲಿ ಜಾಧವ್‌ಗೆ ಏನು ತೊಂದರೆಯಾಗಿತ್ತು? ಕಾರಣವಿಲ್ಲದೆ ಪಕ್ಷ ಬಿಡುವಂತಿಲ್ಲ ಎಂದು ಏಕವಚನದಲ್ಲಿಯೇ ಸಿದ್ದರಾಮಯ್ಯ ಜಾಧವ್‌ಗೆ ಜರಿದರು.

ಸ್ಪಷ್ಟ ಕಾರಣವಿಲ್ಲದೆ, ಜಾಧವ್ ಪಕ್ಷ ಬಿಟ್ಟು ಹೋಗಿದ್ದಾರೆ, ಪಕ್ಷಕ್ಕೆ ದ್ರೋಹ ಬೇಕಾದರೆ ಮಾಡಲಿ, ಆದರೆ ಆತ ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಉಪಚುನಾವಣೆಯಲ್ಲಿ ತನ್ನ ಮಗನನ್ನು ಚುನಾವಣೆಗೆ ನಿಲ್ಲಿಸಿ ಮತಕೇಳುತ್ತಿದ್ದಾನೆ, ಉಪಕಾರ ಮಾಡಿದವರನ್ನ ನೆನಪಿನಲ್ಲಿಟ್ಟುಕೊಳ್ಳುವ ಮನುಷ್ಯತ್ವ ಇರಬೇಕು. ಆದರೆ ಜಾಧವ್‌ಗೆ ಉಪಕಾರ ನೆನಪಿಟ್ಟುಕೊಳ್ಳುವ ಮನುಷ್ಯತ್ವ ಇಲ್ಲ. ಇನ್ನು ಕಲಬುರ್ಗಿ ಲೋಕಸಭೆ ಚುನಾವಣೆಯ ಅಭ್ಯರ್ಥಿ ಉಮೇಶ್ ಜಾಧವ್ ಸೋಲ್ತಾನೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿಗೆ ಕನಸು, ಮನಸ್ಸಿನಲ್ಲೂ ಮತ ಹಾಕಬೇಡಿ, ಅವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವಿರೋಧಿಗಳು ಎಂದು ಹೇಳಿದರು.












Click it and Unblock the Notifications