ಕೊರೊನಾ ಎಫೆಕ್ಟ್ : ನಾಲ್ಕು ಕೆಮ್ಮಿದ್ದಕ್ಕೆ ಜನ ಹೀಗಾ ಮಾಡೋದು? ಶಿವಶಿವಾ..

ಕಲಬುರಗಿ, ಮಾರ್ಚ್ 18: ಕೊರೊನಾ ವೈರಸ್ ನ ಮೊದಲ ಬಲಿ ಈ ಜಿಲ್ಲೆಯಲ್ಲಿ ಆಗಿದ್ದಕ್ಕೋ ಏನೋ, ಜನ ಇಷ್ಟು ಭಯ ಪಡುತ್ತಿದ್ದಾರೆಂದರೆ, ಕೆಮ್ಮಿದರೂ ತಪ್ಪು, ಶೀನಿದರೂ ತಪ್ಪು.

Recommended Video

      Karnataka State Bandh is likely to expand | Karnataka In quarantine | Extended

      ಕೆಮ್ಮಿನ ಕಾಲರ್ ಟ್ಯೂನ್ ನಿಂದ ಎಷ್ಟು ಜನ ಬೇಸತ್ತು ಹೋಗಿದ್ದಾರೋ, ಅದೇ ರೀತಿ ನಾಲ್ಕು ಕೆಮ್ಮಿದರೂ, ಜನ ಅಂಥವರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದಾರೆ. ಅದಕ್ಕೆ, ಇಲ್ಲೊಂದು ತಾಜಾ ಉದಾಹರಣೆಯಿದೆ.

      ನಗರದ ಶರಣಬಸವೇಶ್ವರ ದೇವಾಲಯಕ್ಕೆ ಯುವಕನೊಬ್ಬ ಬಂದಿದ್ದ. ದೇವರ ದರ್ಶನ ಮಾಡಿಕೊಂಡು ಹೊರಬಂದಾಗ, ನಾಲ್ಕು ಬಾರಿ ಕೆಮ್ಮಿದ್ದಾನೆ. ಅಷ್ಟಕ್ಕೇ ಅಲ್ಲಿದ್ದ ಜನರೆಲ್ಲರೂ ಅವನನ್ನು ಸುತ್ತುವರಿದಿದ್ದಾರೆ.

      Corona Effect In Kalaburagi: Youth Forcefully Hospitalized By People Just For Coughing

      ತನಗೆ ಏನೂ ಆಗಿಲ್ಲ ಎಂದು ಯುವಕ ಗೋಗರೆದರೂ ಕೇಳದ ಜನ ಬಲವಂತದಿಂದ ಆತನನ್ನು 108 ಅಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

      ಜಿಮ್ಸ್ ಆಸ್ಪತ್ರೆಯ ವೈದರು ಈತನಿಗೆ ಕೆಮ್ಮು ಬಿಟ್ಟರೆ ಕೊರೊನಾ ವೈರಸ್ ನ ಯಾವ ಲಕ್ಷಣವೂ ಇಲ್ಲ. ಈತನಿಗೆ ಕೆಮ್ಮು ಬಂದಿದ್ದು ಧೂಳಿನಿಂದ ಎಂದು ಹೇಳಿದ್ದಾರೆ. ಆದರೂ, ಈತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸದೆ ಚಿಕಿತ್ಸೆ ನೀಡಲಾಗುತ್ತಿದೆ.

      ಇನ್ನಿಬ್ಬರು ಕೊರೊನಾ ರೋಗಿಗಳು ಕೂಡ ನಗರದಲ್ಲಿಯೇ ಇದ್ದಾರೆ. ಪೆಟ್ರೋಲ್ ಬಂಕ್ ಬಂದ್ ಆಗಲಿವೆ ಎನ್ನುವ ಸುಳ್ಳು ಸುದ್ದಿಯನ್ನು ಯಾರೋ ಕಿಡಿಗೇಡಿಗಳು ನಗರದಲ್ಲಿ ಹಬ್ಬಿಸಿದ್ದರು. ಇದನ್ನು ನಂಬಿದ ಜನರು, ರಾತ್ರೋ ರಾತ್ರಿ ಬಂಕ್‌ ಗಳಿಗೆ ಮುಗಿಬಿದ್ದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+