ಸರ್ಕಾರಿ ಹಣದಿಂದ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್: ಶ್ರೀರಾಮುಲು
ಕಲಬುರಗಿ, ಡಿಸೆಂಬರ್ 11 : ಕಾಂಗ್ರೆಸ್ ಪಕ್ಷ ಸಾಧನಾ ಸಮಾವೇಶಕ್ಕೆ ದುಡ್ಡು ಹೊಂದಿಸಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ನಡೆದ ನವಕರ್ನಾಟಕ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನ ಸಾಧನಾ ಸಮಾವೇಶವನ್ನು ಟೀಕಿಸಿದರು.
'ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷ ಸಾಧನಾ ಸಮಾವೇಶ ಮಾಡುತ್ತಿದೆ? ಸರ್ಕಾರದ ಸಾಧನೆಗಳಾದರೂ ಏನು? ಎಂದು ಪ್ರಶ್ನಿಸಿದರು.

'ಪಕ್ಷದ ಸಮಾವೇಶಕ್ಕೆ ಸರ್ಕಾರದ ಹಣ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು , ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಸ್‌ಪಿಗಳ ಮೂಲಕ ಹಣ ಹೊಂದಾಣಿಕೆ ಮಾಡಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿ ಈ ಬಾರಿ ಖಂಡಿತವಾಗಿ ಅಧಿಕಾರಕ್ಕೆ ಬರುತ್ತದೆ ಎಂದ ಅವರು 'ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬರೋದು ಅಷ್ಟೆ ಸತ್ಯ' ಎಂದರು.












Click it and Unblock the Notifications