ಹೊತ್ತಿ ಉರಿಯುತ್ತಿರುವ ಕುಮಟ, ಹೊನ್ನಾವರ: ಶಾಂತಿ ಕಾಪಾಡುವಂತೆ ಸಿ.ಟಿ.ರವಿ ಮನವಿ
ಕಲಬುರಗಿ, ಡಿಸೆಂಬರ್ 11 : ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಹಿನ್ನೆಲೆಯಲ್ಲಿ ಉದ್ವಿಘ್ನಗೊಂಡಿರುವ ಹೊನ್ನಾವರ ಮತ್ತು ಕುಮಟ ಪಟ್ಟಣಗಳ ಜನರು ಶಾಂತಿ ಕಾಪಾಡಬೇಕು ಬಿಜೆಪಿ ಮುಖಂಡ ಸಿ.ಟಿ.ರವಿ ಮನವಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಟದಲ್ಲಿ ಪ್ರತಿಭಟನೆ ವೇಳೆ ಪೊಲೀಸರ ಕಲ್ಲು ತೂರಾಟ ಮಾಡಿರುವುದು ಸರಿಯಲ್ಲ, ಪ್ರತಿಭಟನೆಯಲ್ಲಿ ಜನರು ತಾಳ್ಮೆ ಕಳೆದುಕೊಳ್ಳುವುದು ಸಹಜ ಆದರೂ ಕುಮಟಾದಲ್ಲಿ ಜನರು ಶಾಂತಿ ಕಾಪಡಬೇಕು ಎಂದು ಸಿ.ಟಿ.ರವಿ ಮನವಿ ಮಾಡಿದರು.

ಸರ್ಕಾರದ ಮೇಲೆ ಜನರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ, ಪರೀಶ್ ಮೇಸ್ತಾ ಅವರದ್ದು ಅನುಮಾನಸ್ಪದ ಸಾವಲ್ಲ, ಅದು ಕೊಲೆ, ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ನೆಡಯುತ್ತಿದೆ ಆದರೆ ಸರ್ಕಾರ ಯಾವೊಂದು ಪ್ರಕರಣಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದರು.

ಸಾಹಿತಿ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿಲ್ಲ, ಈ ಎಲ್ಲಾ ಕೊಲೆಗಳ ಪ್ರಕರಣದಲ್ಲಿ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಅವರು ಆರೋಪ ಮಾಡಿದರು.












Click it and Unblock the Notifications