ಜೇವರ್ಗಿ ಬಳಿ ಭೀಕರ ಅಪಘಾತ 4 ಪ್ರಯಾಣಿಕರು ಸಾವು
ಜೇವರ್ಗಿ, ಜೂನ್ 02: ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಿಗ್ಗೆ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ ನಡೆದಿದ್ದು 4 ಜನ ಮೃತರಾಗಿದ್ದಾರೆ.
ದಾವಣಗೆರೆಯಿಂದ ಕಲಬುರಗಿಗೆ ಬರುತ್ತಿದ್ದ ಬಸ್ ಹಾಗೂ ಜೇವರ್ಗಿಯಿಂದ ಯಡ್ರಾಮಿಗೆ ತೆರಳುತ್ತಿದ್ದ ಬಸ್ಸುಗಳ ನಡುವೆ ಜೇವರ್ಗಿ ತಾಲ್ಲೂಕು ಕ್ರೀಡಾಂಗಣದ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ 4 ಜನ ಸಾವನ್ನಪ್ಪಿದ್ದರೆ, 10ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.

ಮೃತರಲ್ಲಿ ಮೂವರು ಮಹಿಳೆಯರಾಗಿದ್ದು, ಒಬ್ಬ ಡ್ರೈವರ್ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ಜೇವರ್ಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಒಂದು ಬಸ್ ಈಶಾನ್ಯ ಸಾರಿಗೆಯ ಬಸ್ ಆಗಿದ್ದು, ಒಂದು ಈಶಾನ್ಯ ಸಾರಿಗೆ ಬಸ್ ಆಗಿದೆ.












Click it and Unblock the Notifications