ಕಲಬುರಗಿಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Recommended Video
ಕಲಬುರಗಿಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ | Oneindia Kannada
ಕಲಬುರಗಿ, ಜೂನ್ 19: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಬಳಿ ಭಾರಿ ಅನಾಹುತವೊಂದು ತಪ್ಪಿದೆ. ಎದುರಿಗೆ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ಕೆಎಸ್ಆರ್ ಟಿಸಿ ಬಸ್ ಸೇತುವೆಯ ಅಂಚಿಗೆ ಬಂದು ನಿಂತ ಘಟನೆ ಚಿಂಚೋಳಿ - ಭಾಲ್ಕಿ ರಾಜ್ಯ ಹೆದ್ದಾರಿ 75ರಲ್ಲಿ ಮಂಗಳವಾರ ನಡೆದಿದೆ.
ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೇತುವೆಯ ಒಂದು ಬದಿಯ ಅಂಚಿನಲ್ಲಿ ಬಸ್ ನಿಂತಿದ್ದು, ಬಾಗಿಲು ತೆರೆದು ಹೊರಬರಲು ಅವಕಾಶವಿರಲಿಲ್ಲ. ಹೀಗಾಗಿ ಬಸ್‌ನ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ಹಾಗೂ ಕಿಟಕಿಗಳಿಂದ ಕೆಳಗಿಳಿದು ಪ್ರಯಾಣಿಕರು ಪಾರಾಗಿದ್ದಾರೆ.












Click it and Unblock the Notifications