ಕಲಬುರಗಿ ಜೈಲಿನಿಂದ 27 ಕೈದಿಗಳಿಗೆ ಬಿಡುಗಡೆ ಭಾಗ್ಯ

Posted By:
Subscribe to Oneindia Kannada

ಕಲಬುರಗಿ, ಆಗಸ್ಟ್ 15 : 70ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 27 ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ಕರ್ನಾಟಕದ ವಿವಿಧ ಜೈಲುಗಳಲ್ಲಿದ್ದ ಒಟ್ಟು 320 ಕೈದಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ.

ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಸಮ್ಮುಖದಲ್ಲಿ ಸೋಮವಾರ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. 'ಬಿಡುಗಡೆಗೊಳ್ಳುವ ಕೈದಿಗಳು, ಜೈಲಿನಲ್ಲಿ ತೋರಿಸಿದ ಸನ್ನಡತೆಯನ್ನು ಮುಂದುವರೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು' ಎಂದು ಸಚಿವರು ಸಲಹೆ ನೀಡಿದರು.[320 ಕೈದಿಗಳಿಗೆ ಸ್ವಾತಂತ್ರ್ಯ ದಿಚಾರಣೆಯಂದು ಬಿಡುಗಡೆ ಭಾಗ್ಯ]

jail

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವಿ. ಪಾಟೀಲ್ ಅವರು, 'ಸನ್ನಡತೆ ಆಧಾರದ ಮೇಲೆ ಬಿಡುಗಡೆ ಹೊಂದುತ್ತಿರುವ ಎಲ್ಲ ಕೈದಿಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಉದ್ವೇಗ, ರಾಗದ್ವೇಷಕ್ಕೆ ಒಳಗಾಗದೇ ಹೊಸ ಜೀವನ ನಡೆಸಬೇಕು' ಎಂದರು.[ಕೈದಿಗಳ ಬಿಡುಗಡೆಗೆ ಹೊಸ ಮಾರ್ಗಸೂಚಿ]

ಬಿಡುಗಡೆಗೊಂಡ ಕೈದಿಗಳು : ಉಮ್ಮಣ್ಣ ಚಂದಪ್ಪ ಪವಾರ, ಡಾಕಪ್ಪ ಚಂದಪ್ಪ ಪವಾರ, ಶಿವಮೂರ್ತಿ ವಿರುಪಣ್ಣ, ಭರಮಪ್ಪ ಪವಾಡಪ್ಪ, ಬಾಲಪ್ಪ ಯಮನಪ್ಪ, ಷಣ್ಮುಖ ಭೈರಪ್ಪ, ಧೂಳಿಬಾ ಭೈರಪ್ಪ, ಪಂಚಪ್ಪ ಭೈರಪ್ಪ, ಖಂಡಪ್ಪ ಸುಭಾನಪ್ಪ, ಸುಭಾಷಪಾಟೀಲ್ ತುಕಾರಾಮ ಪಾಟೀಲ್, ಪದ್ಮಾವತಿ ಅಶೋಕ ಗುತ್ತೇದಾರ್, ಜಗಪ್ಪ ರಾಮಯ್ಯ ಕಲಾಲ.[ಪುನಃ ಜೈಲಿಗೆ ಹಾಕಿ ಎನ್ನುವ ಮೈಸೂರು ಮಹಿಳೆ ಗೋಳು ಏನು?]

kalaburagi

ಅನಿತಾ ಶಿವಾನಂದ, ಶಾಮ ದುರ್ಗಪ್ಪ, ಕುಪೇಂದ್ರರಾಯ ರೇವಣಸಿದ್ದಪ್ಪ, ಮಲ್ಲಪ್ಪ ಶಾಂತಮಲ್ಲಪ್ಪ, ಅಹ್ಮದ್‍ಅಲಿ ಇಬ್ರಾಹಿಂ ಖುರೇಶಿ, ಮಹ್ಮದ್ ಮಹಿಬೂಬ್ ಬಂದೇಲಿ, ಜೋತಯ್ಯ ಕಾಶಯ್ಯ, ವೀರೇಂದ್ರ ಬಸವಣ್ಣಪ್ಪ, ಶಾಂತಕುಮಾರ್ ವಿಶ್ವನಾಥ, ಬಾಬು ಗುಂಡಪ್ಪ, ಉಮಾಕಾಂತ ಮಹಾಲಿಂಗಪ್ಪ ಪಂಚಗಟ್ಟಿ, ಮಹಾದೇವ ರೇವಣಪ್ಪ, ಸುನೀಲ್ ವಿನ್ಸೆಂಟೆ ಫರ್ನಾಂಡಿಸ್ ರಾಬರ್ಟ್ ಡಿಸೋಜಾ, ಪಾಂಡಾ ಮಾಣಿಕ್, ಬಸವರಾಜ ಕಲ್ಲಪ್ಪ ಡಗ್ಗಾ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
27 prisoners walk free from Kalaburahi central jail on August 15, 2016. Karnataka government released 320 prisoners on the occasion of 70th Independence Day.
Please Wait while comments are loading...