ರಾಜ್ಯಾದ್ಯಂತ ಸನ್ನಡತೆ ಆಧಾರದಲ್ಲಿ 144 ಖೈದಿಗಳ ಬಿಡುಗಡೆ
ಕಲಬುರಗಿ, ಡಿಸೆಂಬರ್ 13 : ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲುಗಳಿಂದ 144 ಖೈದಿಗಳು ಬಿಡುಗಡೆ ಆಗಿದ್ದಾರೆ. ಅದರಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಐವರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.
ಕಲಬುರಗಿ ಕೇಂದ್ರ ಕಾರಾಗೃಹದಿಂದ ಓರ್ವ ಮಹಿಳಾ ಖೈದಿ ಸೇರಿದಂತೆ ಐವರು ರಿಲಿಸ್ ಆಗಿದ್ದು, ಕೈದಿಗಳಿಗೆ ಪ್ರಮಾಣ ಪತ್ರ ನೀಡಿ ಕಲಬುರಗಿ ಸೇಂಟ್ರಲ್ ಜೈಲ್ ಚಿಫ್ ಸೂಪರಿಯೆಂಟ್‌ಡೆಂಟ್ ಕೃಷ್ಣಕುಮಾರ ಅವರು ಬಿಡುಗಡೆ ಮಾಡಿದರು.

ಬಿಡುಗಡೆ ಆದವರ ಪಟ್ಟಿ ಇಂತಿದೆ
ಕಾಶಿಬಾಯಿ, ಆಳಂದ ತಾಲೂಕಿನ ಮುದ್ದಡಗಿ ಗ್ರಾಮ, ಜಯಪ್ಪ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬೈಚ್‌ಬಾಳ ಗ್ರಾಮ , ಅಡಿವೆಪ್ಪ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬೈಚ್‌ಬಾಳ ಗ್ರಾಮ , ಲಾಲ್‌ಸಾ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಏವೂರ್ ಗ್ರಾಮ, ಅಂದಣ್ಣ, ಆಳಂದ ತಾಲೂಕಿನ ಹಿರೋಳಿ ಗ್ರಾಮ,












Click it and Unblock the Notifications