ಸುಪ್ರೀಂ ಮೊರೆ ಹೋದ ಸ್ಪೀಕರ್; ಸಚಿನ್ ಪೈಲೆಟ್ ಬಣಕ್ಕೆ ಸಂಕಷ್ಟ!

ಜೈಪುರ, ಜುಲೈ 23 : ಸಚಿನ್ ಪೈಲೆಟ್ ಮತ್ತು ಅವರ ಬೆಂಬಲಿತ ಶಾಸಕರಿಗೆ ಸಂಕಷ್ಟ ಶುರುವಾಗಿದೆ. ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಸ್ಪೀಕರ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಶಾಸಕರ ಅನರ್ಹತೆ ವಿಚಾರ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದೆ.

Recommended Video

      Corona Vaccine ತಯಾರಿಸುವಲ್ಲಿ ಯಾವ ದೇಶ ಯಾವ ಹಂತದಲ್ಲಿದೆ ? | Oneindia Kannada

      ರಾಜಸ್ಥಾನ ಹೈಕೋರ್ಟ್ ಸಚಿನ್ ಪೈಲೆಟ್ ಸೇರಿದಂತೆ 19 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೀಡಿರುವ ನೋಟಿಸ್‌ಗೆ ಶುಕ್ರವಾರದ ತನಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸ್ಪೀಕರ್ ಸಿ. ಪಿ. ಜೋಶಿ ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

      ಸ್ಪೀಕರ್ ಪರವಾಗಿ ಕಪಿಲ್ ಸಿಬಲ್ ವಾದ ಮಂಡನೆ ಮಾಡಲಿದ್ದಾರೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ. ಆರ್. ಗವಿ ಮತ್ತು ಕೃಷ್ಣ ಮುರಾರಿ ಅವರ ತ್ರಿ ಸದಸ್ಯ ಪೀಠ ಸ್ಪೀಕರ್ ಸಿ. ಪಿ. ಜೋಶಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲಿದೆ.

      ಸಚಿನ್ ಪೈಲೆಟ್ ಮತ್ತು ಇತರ 19 ಶಾಸಕರು ಸಲ್ಲಿಸುರವ ಅರ್ಜಿಯ ವಿಚಾರಣೆ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದೆ. ಶುಕ್ರವಾರಕ್ಕೆ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಸುಪ್ರೀಂಕೋರ್ಟ್ ಯಾವ ಆದೇಶ ನೀಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

      ಎರಡು ಬಾರಿ ತಡೆ ನೀಡಲಾಗಿದೆ

      ಎರಡು ಬಾರಿ ತಡೆ ನೀಡಲಾಗಿದೆ

      ಸ್ಪೀಕರ್ ಶಾಸಕರಿಗೆ ನೀಡಿರುವ ಅನರ್ಹತೆ ನೋಟಿಸ್ ವಿಚಾರದಲ್ಲಿ ಕ್ರಮ ಕೈಗೊಳ್ಳಬಾರದು ಎಂದು ಎರಡು ಬಾರಿ ತಡೆ ನೀಡಲಾಗಿದೆ. ರಾಜಸ್ಥಾನ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಸ್ಪೀಕರ್ ಸಿ. ಪಿ. ಜೋಶಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

      ಸ್ಪೀಕರ್‌ಗೆ ಅಧಿಕಾರವಿದೆ

      ಸ್ಪೀಕರ್‌ಗೆ ಅಧಿಕಾರವಿದೆ

      ಶಾಸಕರನ್ನು ಅನರ್ಹಗೊಳಿಸಲು ನೋಟಿಸ್ ನೀಡಲು ಸ್ಪೀಕರ್‌ಗೆ ಪೂರ್ಣ ಅಧಿಕಾರವಿದೆ. ಸಂವಿಧಾನಿವಾಗಿ ಇರುವ ಅಧಿಕಾರ ಬಳಸಿಕೊಂಡು ನೋಟಿಸ್ ನೀಡಿದ್ದಾರೆ. ಇದಕ್ಕೆ ಹೈಕೋರ್ಟ್ ತಡೆ ನೀಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

      ಹೈಕೋರ್ಟ್ ಪ್ರಕ್ರಿಯೆಗೆ ತಡೆ ನೀಡಿ

      ಹೈಕೋರ್ಟ್ ಪ್ರಕ್ರಿಯೆಗೆ ತಡೆ ನೀಡಿ

      ಬಂಡಾಯ ಶಾಸಕರು ಸ್ಪೀಕರ್ ನೀಡಿರುವ ನೋಟಿಸ್‌ ಅನ್ನು ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

      ಜುಲೈ 24ಕ್ಕೆ ಹೈಕೋರ್ಟ್ ತೀರ್ಪು

      ಜುಲೈ 24ಕ್ಕೆ ಹೈಕೋರ್ಟ್ ತೀರ್ಪು

      ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಅನ್ನು ಸಚಿನ್ ಪೈಲೆಟ್ ಮತ್ತು ಇತರ ಶಾಸಕರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಜುಲೈ 24ಕ್ಕೆ ತೀರ್ಪು ಪ್ರಕಟವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+