ವಸುಂಧರಾ ರಾಜೆ ದಪ್ಪವಾಗಿದ್ದಾರೆ, ಅವರಿಗೆ ರೆಸ್ಟ್ ಕೊಡಿ: ಶರದ್ ಯಾದವ್!
ಜೈಪುರ, ಡಿಸೆಂಬರ್ 7: "ತೆಳ್ಳಗಿದ್ದ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ದಪ್ಪವಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ" ಎಂದು ಜೆಡಿಯು ನ ಉಚ್ಛಾಟಿತ ನಾಯಕ ಶರದ್ ಯಾದವ್ ಹೇಳಿದ್ದಾರೆ.
ವಸುಂಧರಾ ರಾಜೆ ಅವರದ ವಿರುದ್ಧ ಆಲ್ವಾರ್ ನಲ್ಲಿ ಪ್ರಚಾರ ನಡೆಸುತ್ತಿದ್ದ ಶರದ್ ಯಾದವ್ ಹಾಲಿ ಮುಖ್ಯಮಂತ್ರಿ ಮೇಲೆ ವ್ಯಂಗ್ಯದ ಸುರುಮಳೆಗೈದರು.
ರಾಜಸ್ಥಾನದಲ್ಲಿ ಶುಕ್ರವಾರ ಚುನಾವಣೆ ನಡೆಯಲಿದ್ದು, ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಲು ವಸುಂಧರಾ ರಾಜೆ ಹವಣಿಸುತ್ತಿದ್ದಾರೆ. ತಮ್ಮ ಜಲ್ರಾಪಠಾಣ್ ಕ್ಷೇತ್ರದಲ್ಲಿ ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮನ್ವೇಂದ್ರ ಸಿಂಗ್ ಅವರನ್ನು ರಾಜೆ ಎದುರಿಸಲಿದ್ದಾರೆ.

ಮನ್ವೇಂದ್ರ ಸಿಂಗ್ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಪುತ್ರ.
ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯವರೆಗೆ ಮುಂದುವರಿಯಲಿದೆ.
ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿನ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನ.29 ರಂದು ಹೃದಯಾಘಾತದಿಂದ ಮೃತರಾದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಆದ್ದರಿಂದ ನಾಳೆ 199 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ಡಿಸೆಂಬರ್ 11 ಮಂಗಳವಾರದಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications