ಪಾಕಿಸ್ತಾನದ ದ್ರೋಣ್ ಹೊಡೆದುರುಳಿಸಿದ ಸುಖೋಯ್
Recommended Video

ಜೈಪುರ, ಮಾರ್ಚ್ 04 : ಸುಖೋಯ್ 30ಎಂಕೆಐ ವಿಮಾನ ಪಾಕಿಸ್ತಾನದ ದ್ರೋಣ್ ಅನ್ನು ಹೊಡೆದು ಹಾಕಿದೆ. ಭಾರತೀಯ ವಾಯುಪಡೆ ದ್ರೋಣ್ ಹಾರಾಟವನ್ನು ಪತ್ತೆ ಹಚ್ಚಿತ್ತು. ಫೆ.27ರಂದು ಸಹ ಒಂದು ದ್ರೋಣ್ ಹೊಡೆದುರುಳಿಸಲಾಗಿತ್ತು.
ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿ ಭಾಗದ ಬಿಕಾನೇರ್ ಬಳಿ ಪಾಕಿಸ್ತಾನದ ದ್ರೋಣ್ ಅನ್ನು ಹೊಡೆದು ಹಾಕಲಾಗಿದೆ. ವಾಯುಪಡೆಯ ರಡಾರ್‌ಗೆ ದ್ರೋಣ್ ಅಕ್ರಮ ಹಾರಾಟದ ಸುಳಿವು ಸಿಕ್ಕಿತ್ತು.

ವಾಯುಪಡೆಯ ಮುಖ್ಯಸ್ಥ ಬಿ.ಎಸ್.ಧನೋವಾ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದಾಗ, 'ಉಗ್ರರ ಶಿಬಿರಗಳ ಮೇಲೆ ನಡೆದ ದಾಳಿ ಯೋಜಿತ ಕಾರ್ಯಾಚರಣೆ. ವಾಯುಪಡೆಯಲ್ಲಿರುವ ಎಲ್ಲಾ ವಿಮಾನಗಳು ಶತ್ರುಗಳ ವಿರುದ್ಧ ಹೋರಾಡಲು ಸಮರ್ಥವಾಗಿದೆ' ಎಂದು ಹೇಳಿದ್ದರು.
ಪಾಕಿಸ್ತಾನದ ವಾಯುಪಡೆ ಗಡಿಯಲ್ಲಿ ಸರ್ವ ರೀತಿಯಲ್ಲಿ ಸಿದ್ಧವಾಗಿರುವಂತೆ ಯೋಧರಿಗೆ ಸೂಚನೆ ನೀಡಿದೆ. ಭಾರತ-ಪಾಕಿಸ್ತಾನ ನಡುವಿನ ವಾತಾವರಣ ಇನ್ನೂ ತಿಳಿಗೊಂಡಿಲ್ಲ.
ಫೆ.26ರಂದು ಭಾರತದ ವಾಯುಪಡೆ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿತ್ತು. ಇದಾದ ಬಳಿಕ ಪಾಕಿಸ್ತಾನದ ಡ್ರೋಣ್ ಅಕ್ರಮವಾಗಿ ಭಾರತ ಪ್ರವೇಶಿಸಿತ್ತು. ಆಗ ಭಾರತೀಯ ಸೇನೆ ಡ್ರೋಣ್ ಅನ್ನು ಹೊಡೆದು ಹಾಕಿತ್ತು.











Click it and Unblock the Notifications