ರಾಷ್ಟ್ರಪಕ್ಷಿಗಳಿಗೆ ವಿಷವಿಟ್ಟ ರಾಜಸ್ತಾನದ ರೈತ!
ಜೈಪುರ, ಡಿಸೆಂಬರ್ 24: ರಾಜಸ್ತಾನದಲ್ಲಿ ರೈತನೊಬ್ಬ 23 ನವೀಲುಗಳನ್ನು ಬಲಿ ಪಡೆದ ಘಟನೆ ಬಿಕಾನೇರ್ ಜಿಲ್ಲೆಯ ಸೆರುನಾ ಗ್ರಾಮದ ಬಳಿ ನಡೆದಿದೆ.
ತನ್ನ ಹೊಲಕ್ಕೆ ಕಡಲೆ ಬೆಳೆ ತಿನ್ನಲು ಬರುತ್ತವೆ ಎಂದು ರೈತ ದಿನೇಶ್ ಕುಮಾರ ಹಸಿ ಕಡಲೆ ಕಾಳಿನಲ್ಲಿ ವಿಷವನ್ನು ಇಟ್ಟು ನವಿಲುಗಳುಗೆ ಕಾಯ್ದು ಕೂತಿದ್ದಾನೆ. ಹಸಿ ಕಡಲೆ ಕಾಳು ತಿಂದ 23 ನವಿಲುಗಳು ಮೃತಪಟ್ಟಿವೆ.

ಈ ಕುರಿತು ಸ್ಥಳಕ್ಕೆ ದೌಡಾಯಿಸಿ ಬಿಕಾನೇರ್ ಅರಣ್ಯ ಇಲಾಖೆ ಅಧಿಕಾರಿಗಳು ರೈತ ದಿನೇಶ್ ಕುಮಾರನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಮೃತ 23 ನವೀಲುಗಳ ಕಳೆಬರಗಳನ್ನು ವಶಕ್ಕೆ ಪಡೆದಿದ್ದಾರೆ. ನವಿಲುಗಳ ಸಾವಿಗರ ಕಾರಣನಾದ ರೈತ ದಿನೇಶ್ ವಿರುದ್ಧ ಪರಿಸರ ಪ್ರೇಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಶಿಸುಸುತ್ತಿರುವ ನವಿಲುಗಳ ರಕ್ಷಣೆಗೆ ಸರಕಾರ ಸೂಕ್ತ ಕಾನೂನುಗಳನ್ನು ತರಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications