ಮಧ್ಯಪ್ರದೇಶದಲ್ಲಿ ಅಪಘಾತ: ಶಾಲೆಗೆ ತೆರಳುತ್ತಿದ್ದ 7 ಮಕ್ಕಳ ದುರಂತ ಸಾವು
ಸಾತ್ನಾ, ನವೆಂಬರ್ 22: ಮಧ್ಯಪ್ರದೇಶದ ಸಾಂತಾ ಜಿಲ್ಲೆಯಲ್ಲಿ ಶಾಲಾ ವಾಹನಕ್ಕೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಏಳು ಮಕ್ಕಳು ಮೃತರಾದ ದುರ್ಘಟನೆ ನಡೆದಿದೆ.
ಇಲ್ಲಿನ ಬಿರ್ಸಿಂಗ್ಪುರ ಎಂಬಲ್ಲಿಯ ಲಕಿ ಕಾನ್ವೆಂಟ್ ಶಾಲೆಯ ಏಳು ಮಕ್ಕಳು ಅಸುನೀಗಿದ್ದು, ಎಂಟು ಮಕ್ಕಳು ಗಂಭಿರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಶಾಲಾ ವಾಹನದ ಚಾಲನಕನೂ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕಳೆದ ಏಪ್ರಿಲ್ ನಲ್ಲಿ ಉತ್ತರ ಪ್ರದೇಶದ ಖುಷಿನಗರ ಎಂಬಲ್ಲಿ ಶಾಲಾ ವಾಹನಕ್ಕೆ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ 13 ಮಕ್ಕಳು ಮೃತರಾಗಿದ್ದರು.
ವಾಹನ ಚಾಲಕ ಇಯರ್ ಫೋನ್ ಹಾಕಿಕೊಂಡು ಗಾಡಿ ಓಡಿಸುತ್ತಿದ್ದರಿಂದ ರೈಲು ಬಂದಿದ್ದೇ ತಿಳಿಯದೆ ಈ ಅವಘಡ ಸಂಭವಿಸಿದೆ ಎನ್ನಲಾಗಿತ್ತು. ಅದಕ್ಕೂ ಕೆಲ ದಿನಗಳ ಹಿಂದಷ್ಟೇ ಹಿಮಾಚಲ ಪ್ರದೇಶದ ಕಮರಿಯೊಂದಕ್ಕೆ ಬಸ್ಸು ಉರುಳಿದ ಪರಿಣಾಮ 26 ಮಕ್ಕಳು ಮೃತರಾಗಿದ್ದರು.












Click it and Unblock the Notifications