ಭೂ ಒತ್ತುವರಿ ಖಂಡಿಸಿ 21 ರೈತರಿಂದ 'ಜಮೀನು ಸಮಾಧಿ ಸತ್ಯಾಗ್ರಹ'
ಜೈಪುರ, ಮಾರ್ಚ್ 2: ವಸತಿ ಯೋಜನೆಗಾಗಿ ಜೈಪುರ ಅಭಿವೃದ್ದಿ ಪ್ರಾಧಿಕಾರದ ಭೂ ಒತ್ತುವರಿ ಖಂಡಿಸಿ 21 ರೈತರು ಜಮೀನು ಸಮಾಧಿ ಸತ್ಯಾಗ್ರಹ ಮಾಡುತ್ತಿರುವ ಘಟನೆ ರಾಜಸ್ತಾನದ ನಿಂದರ್ ಗ್ರಾಮದಲ್ಲಿ ಕಂಡು ಬಂದಿದೆ.
ಜೈಪುರ ಅಭಿವೃದ್ದಿ ಪ್ರಾಧಿಕಾರ ಅಕ್ರಮವಾಗಿ ರೈತರ ಭೂಮಿ ವಶಪಡಿಸಿಕೊಂಡಿದೆ. ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ಪ್ರಕಾರ ತಮ್ಮ ಜಮೀನನ್ನು ವಶಪಡಿಸಿಕೊಂಡು, ಅದಕ್ಕೆ ತಕ್ಕಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ಜಮೀನು ಸಮಾಧಿ ಸತ್ಯಾಗ್ರಹ ಅಂದ್ರೆ ಕುತ್ತಿಗೆವರೆಗೂ ಭೂಮಿಯಲ್ಲಿ ಹೂತುಕೊಂಡು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. 21 ರೈತರ ಪೈಕಿ 5 ಮಹಿಳೆಯರು ಭಾಗಿಯಾಗಿದ್ದಾರೆ.

ಈ ಮೊದಲು ಜನವರಿ ತಿಂಗಳಲ್ಲಿ ರೈತರು ಜಮೀನು ಸಮಾಧಿ ಸತ್ಯಾಗ್ರಹ ಮಾಡಿದ್ದರು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ 50 ದಿನದಲ್ಲಿ ತಮ್ಮ ಸಮಸ್ಯೆ ಬಗೆಹರಿಸಿಕೊಡುವುದಾಗಿ ಆಶ್ವಾಸನೆ ನೀಡಿತ್ತು. ನಾಲ್ಕು ದಿನದ ನಂತರ ಪ್ರತಿಭಟನೆ ಕೈಬಿಟ್ಟಿದ್ದರು.
'ಸದ್ಯಕ್ಕೆ 21 ರೈತರು ಜಮೀನು ಸಮಾಧಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ಸೋಮವಾರ 50 ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಹಕ್ಕು ತಮಗೆ ಸಿಗುವವರೆಗೂ ಈ ಹೋರಾಟ ನಿಲ್ಲಿಸಲ್ಲ' ಎಂದು ಹೋರಾಟಗಾರ ನಾಗೇಂದ್ರ ಸಿಂಗ್ ತಿಳಿಸಿದ್ದಾರೆ.

ಇದಕ್ಕೂ ಮುಂಚೆ 2017ರಲ್ಲಿ ಜೈಪುರ ಅಭಿವೃದ್ದಿ ಪ್ರಾಧಿಕಾರದ ವಿರುದ್ಧ ರೈತರು ಪ್ರತಿಭಟನೆ ಮಾಡಿದ್ದರು. ಇದರಲ್ಲಿ ಹಲವರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.












Click it and Unblock the Notifications