Jagaluru Elections: ಜಗಳೂರಿನಲ್ಲಿ ಹಾಲಿ, ಮಾಜಿ ಶಾಸಕರ ನೇರ ಹಣಾಹಣಿಯಲ್ಲಿ ಯಾರಿಗೆ ಜಯ?
ದಾವಣಗೆರೆ, ಮಾರ್ಚ್ 25: ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯಿರುವ ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರ ಹಲವು ಸಮಸ್ಯೆಗಳಿಂದ ನರಳುತ್ತಿದೆ. ಇದೆ ನಡುವೆ ಚುನಾವಣೆ ಬರುತ್ತಿದ್ದು, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿಗೆ ಸಜ್ಜಾಗಿದೆ. ಕಳೆದ ಮೂರು ಚುನಾವಣೆಗಳಿಂದಲೂ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಮತ್ತು ಮಾಜಿ ಶಾಸಕ ಎಚ್.ಪಿ. ರಾಜೇಶ್ ನಡುವೆ ಈ ಬಾರಿಯೂ ಪೈಪೋಟಿ ನಡೆಯಲಿದೆ.
*ಜಗಳೂರಿನ ಬಗ್ಗೆ ಮಾಹಿತಿ*
ಜಗಳೂರು ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ತಾಲೂಕಿನಲ್ಲಿ ಚಿನ್ನ ಹಗರಿ ಎಂಬ ನದಿ ಹರಿಯುತ್ತದೆ. ಇದಕ್ಕೆ ಚೆಕ್ ಡ್ಯಾಂ ಕಟ್ಟಲಾಗಿದೆ. ಆದರೂ ಇದು ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯವು ಭಾರತದಲ್ಲಿ ಅಳಿವಿನಂಚಿನಲ್ಲಿರುವ ನಾಲ್ಕು ಕೊಂಬಿನ ಹುಲ್ಲೆಗಳ (ಚಿಗರೆ) ಆವಾಸ ಸ್ಥಾನವಾಗಿದೆ.

ಜಗಳೂರಜ್ಜ ಎಂಬ ಋಷಿಯಿಂದ ಜಗಳೂರು ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇಲ್ಲಿನ ಜನರದ್ದು, ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ IV ರ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಇಮಾಮ್ ಸಾಬ್ ಅವರು ಜಗಳೂರಿನ ಅಭಿವೃದ್ಧಿಗೆ ಸ್ಮರಣೀಯ ಸೇವೆಗಳನ್ನು ನೀಡಿದ್ದಾರೆ. ಜಗಳೂರು ಇಮ್ಮಣ್ಣ ಎಂದೇ ಖ್ಯಾತರಾದ ಜಗಳೂರು ಮಹಮದ್ ಇಮಾಂ ಸಾಹೇಬ ಸ್ವಾತಂತ್ರಪೂರ್ವ ಮೈಸೂರು ಸಂಸ್ಥಾನ ಸರ್ಕಾರದಲ್ಲಿ ಮಂತ್ರಿಯಾಗಿ, ಮೈಸೂರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಸೇವೆ ಸಲ್ಲಿಸಿದರು.
*ಜಗಳೂರು ರಾಜಕೀಯ ಚಿತ್ರಣ*
2008ರಲ್ಲಿ ಕ್ಷೇತ್ರ ವಿಂಗಡಣೆಯಾಗಿ ಜಗಳೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ ಹೋಬಳಿಯ 7 ಗ್ರಾ.ಪಂ. ವ್ಯಾಪ್ತಿಯ 35 ಗ್ರಾಮಗಳು ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಈ ಹಿಂದಿನಿಂದಳೂ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈ ಹಿಂದೆ 1962ರಲ್ಲಿ ಒಂದು ಅವಧಿಗೆ ಮಾತ್ರ ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.
2008ರಲ್ಲಿ ಕ್ಷೇತ್ರ ವಿಂಗಡಣೆಯಾಗುವ ಮುಂಚೆ, 1972ರಿಂದ 1989ರ ವರೆಗೆ ಜಿ.ಎಚ್. ಅಶ್ವಥ ರೆಡ್ಡಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1994 ರಲ್ಲಿ ಕೆಸಿಪಿಯ ಎಂ ಬಸಪ್ಪ ಶಾಸಕರಾದರು. ಆದರೆ, ಮುಂದಿನ ಚುನಾವಣೆಯಲ್ಲಿ ಮತ್ತೆ ಜಿ.ಎಚ್. ಅಶ್ವಥ ರೆಡ್ಡಿ ಅಧಿಕಾರ ಪಡೆದರು. 2004 ರಲ್ಲಿ ಬಿಜೆಪಿಯ ಗುರುಸಿದ್ದನಗೌಡ ಆತ್ಕೆಯಾಗುವ ಮೂಲಕ ಬಿಜೆಪಿ ಇಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿತು.

ಕ್ಷೇತ್ರ ವಿಂಗಡಣೆಯಾದ ಬಳಿಕ ಇದು ಎಸ್ ವಿ ರಾಮಚಂದ್ರ ಮತ್ತು ಎಚ್.ಪಿ. ರಾಜೇಶ್ ನಡುವಿನ ಪೈಪೋಟಿಗೆ ಜಗಳೂರು ಸಾಕ್ಷಿಯಾಗಿದೆ. 2008ರಲ್ಲಿ ಎಸ್ ವಿ ರಾಮಚಂದ್ರ ಕಾಂಗ್ರೆಸ್‌ನಿಂದ ಎಚ್.ಪಿ. ರಾಜೇಶ್ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಳಿಸಿತ್ತು. ಆದರೆ, ಆಪರೇಶನ್ ಕಮಲ ನಡೆದು ಮತ್ತೆ 2011ರಲ್ಲಿ ಉಪಚುನಾವಣೆ ನಡೆಯಿತು.

ಉಪಚುನಾವಣೆಯಲ್ಲಿ ಬಿಜೆಪಿಯಿಂದ ರಾಮಚಂದ್ರ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಎಚ್.ಪಿ. ರಾಜೇಶ್ ಪಕ್ಷೇತರನಾಗಿ ಸ್ಪರ್ಧಿಸಿದ್ದರು ಚುನಾವಣೆಯಲ್ಲಿ ರಾಮಚಂದ್ರ ಕೇವಲ 3,500 ಮತಗಳ ಅಂತರದಿಂದ ಗೆದ್ದು ಬಂದಿದ್ದರು. 2013ರ ಚುನಾವಣೆಯಲ್ಲಿ ಎಚ್.ಪಿ. ರಾಜೇಶ್ ಕಾಂಗ್ರೆಸ್ ಅಭ್ಯರ್ಥಿಯಾದರು, ಬಿಜೆಪಿಯಿಮದ ಕೆಜೆಪಿಗೆ ಹೋಗಿದ್ದ ರಾಮಚಂದ್ರ ಕೂಡ ಕೆಜೆಪಿ ಅಭ್ಯರ್ಥಿಯಾದರು. ಚುನಾವಣೆಲ್ಲಿ ಎಚ್.ಪಿ. ರಾಜೇಶ್ 77,805 ಮತಗಳನ್ನು ಪಡೆದರೆ, ಎಸ್‌ವಿ ರಾಮಚಂದ್ರ 40915 ಮತಗಳನ್ನು ಪಡೆದಿದ್ದರು.
2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಎಸ್ ವಿ ರಾಮಚಂದ್ರ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಎಚ್.ಪಿ. ರಾಜೇಶ್ ವಿರುದ್ಧ ಮೂವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದರು. ಚುನಾವಣೆಯಲ್ಲಿ ಎಸ್ ವಿ ರಾಮಚಂದ್ರ 78948 ಮತಗಳನ್ನು ಪಡೆದರೇ, ಎಚ್.ಪಿ. ರಾಜೇಶ್ 49727ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಎಸ್ ವಿ ರಾಮಚಂದ್ರ ಅವರಿಗೆ ಟಿಕೆಟ್ ಸಿಗುವ ಲಕ್ಷಣಗಳಿವೆ. ಆದರೆ ಕಾಂಗ್ರೆಸ್‌ನಲ್ಲಿ ಎಚ್.ಪಿ. ರಾಜೇಶ್ ಜೊತೆಗೆ ಮತ್ತೆ ಐವರು ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಬಾರಿಯೂ ಇಬ್ಬರು ಮುಖಾಮುಖಿಯಾಗುವ ಸಾಧ್ಯತೆಯಿದ್ದು, ಜಗಳೂರಿನ ಜನರು ಯಾರಿಗೆ ಜಯಮಾಲೆ ಹಾಕುವರೋ ಕಾದು ನೋಡಬೇಕಿದೆ.
Jagaluru Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಸ್‌ವಿ ರಾಮಚಂದ್ರ | 78948 | ಎಚ್.ಪಿ. ರಾಜೇಶ್ | 49727 |
| 2013 | ಎಚ್.ಪಿ. ರಾಜೇಶ್ | 77805 | ಎಸ್‌ವಿ ರಾಮಚಂದ್ರ | 40915 |
| 2008 | ಎಸ್ ವಿ ರಾಮಚಂದ್ರ | 38574 | ಎಚ್.ಪಿ. ರಾಜೇಶ್ | 35763 |
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications