ಎಫ್‌ಬಿಐ ನಿರ್ದೇಶಕನನ್ನು ಕಿತ್ತೊಗೆದ ಡೊನಾಲ್ಡ್ ಟ್ರಂಪ್
ಅಮೆರಿಕಾದ ಖ್ಯಾತ ತನಿಖಾ ಸಂಸ್ಥೆ ಎಫ್‌ಬಿಐ ನಿರ್ದೇಶಕ ಹುದ್ದೆಯಿಂದ ಜೇಮ್ಸ್ ಕೊಮೆಯವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿತ್ತುಹಾಕಿದ್ದಾರೆ. ಅಟಾರ್ನಿ ಜನರಲ್ ಹಾಗೂ ಉಪ ಅಟಾರ್ನಿ ಜನರಲ್ ಶಿಫಾರಸ್ಸಿನ ಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ವಾಷಿಂಗ್ಟನ್, ಮೇ 10: ತಾನು ಅಧಿಕಾರಕ್ಕೆ ಬರುತ್ತಿದ್ದಂತೆ ಆಯಕಟ್ಟಿನ ಜಾಗದಲ್ಲಿರುವ ಪ್ರಮುಖರ ಹುದ್ದೆಗಳನ್ನು ಬದಲಾವಣೆ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಲ್ಲಿನ ತನಿಖಾ ಸಂಸ್ಥೆಯ ಬುಡಕ್ಕೆ ಕೈ ಹಾಕಿದ್ದಾರೆ.
ಅಮೆರಿಕಾದ ಖ್ಯಾತ ತನಿಖಾ ಸಂಸ್ಥೆ ಎಫ್‌ಬಿಐ ನಿರ್ದೇಶಕ ಹುದ್ದೆಯಿಂದ ಜೇಮ್ಸ್ ಕೊಮೆಯವರನ್ನು ಕಿತ್ತುಹಾಕಿದ್ದಾರೆ ಡೊನಾಲ್ಡ್ ಟ್ರಂಪ್.
ಈ ಕುರಿತು ಆದೇಶ ನೀಡಿರುವ ಡೊನಾಲ್ಡ್ ಟ್ರಂಪ್ ನಿಮ್ಮನ್ನು ಕಿತ್ತೊಗೆಯುವಂತೆ ಅಟಾರ್ನಿ ಜನರಲ್ ಹಾಗೂ ಉಪ ಅಟಾರ್ನಿ ಜನರಲ್ ಶಿಫಾರಸ್ಸು ಮಾಡಿದ್ದಾರೆ. ಈ ಶಿಫಾರಸ್ಸಿನ ಅನ್ವಯ ನಾನು ನಿಮ್ಮನ್ನು ಈ ಹುದ್ದೆಯಿಂದ ಬಿಡುಗಡೆ ಮಾಡುತ್ತಿದ್ದೇನೆ ಎಂದು ಟ್ರಂಪ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮೂರು ಬೇರೆ ಬೇರೆ ಸಂದರ್ಭಗಳಲ್ಲಿ ನೀವು ನನ್ನ ಮೇಲೆ ಯಾವುದೇ ತನಿಖೆ ನಡೆಸುತ್ತಿಲ್ಲ ಎಂಬ ಮಾಹಿತಿ ನೀಡಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ನ್ಯಾಯಾಂಗ ಇಲಾಖೆ ನೀಡಿರುವ ಆದೇಶದ ಪ್ರಕಾರ ನೀವು ಸಂಸ್ಥೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿಲ್ಲ. ಜನರ ನಂಬಿಕೆ ಉಳಿಸುವ ಸಲುವಾಗಿ ಎಫ್‌ಬಿಐಗೆ ಹೊಸ ಮುಖ್ಯಸ್ಥರನ್ನು ನೇಮಿಸುವುದು ಅನಿವಾರ್ಯ ಎಂದು ಟ್ರಂಪ್ ಪತ್ರದಲ್ಲಿ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಅಮೆರಿಕಾದ ಸೆಕ್ರೆಟರಿ ಆಪ್ ಸ್ಟೇಟ್ ಆಗಿದ್ದ ವೇಳೆ ಖಾಸಗಿ ಇಮೇಲ್ ಸರ್ವರ್ ಬಳಕೆ ಮಾಡಿದ ವಿಚಾರವನ್ನು ಎಫ್‌ಬಿಐ ತನಿಖೆ ನಡೆಸುತ್ತಿತ್ತು. ಈ ತನಿಖೆ ಸಂದರ್ಭದಲ್ಲಿ ಎಫ್ಬಿಐ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೊಮೆ ವಿವಾದಕ್ಕೆ ಗುರಿಯಾಗಿದ್ದರು.

ಇನ್ನು ಕೊಮೆ ಉಚ್ಛಾಟನೆ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಹೌಸ್ ಜುಡಿಶಿಯರಿ ಕಮಿಟಿಯ ಜಾನ್ ಕನ್ವೆಯರ್, "ಅಮೆರಿಕಾ ಚುನಾವಣೆಯಲ್ಲಿ ರಷ್ಯಾ ಬೀರಿದ ಪ್ರಭಾವದ ಕುರಿತು ತನಿಖೆ ನಡೆಸುತ್ತಿದ್ದ ಸ್ವತಂತ್ರ ತನಿಖಾ ಸಂಸ್ಥೆ (ಎಫ್‌ಬಿಐ) ಮೇಲೆ ಡೊನಾಲ್ಡ್ ಟ್ರಂಪ್ ಅವರ ಇವತ್ತಿನ ನಿರ್ಧಾರ ಪರಿಣಾಮ ಬೀರಲಿದೆ. ಈ ಮೂಲಕ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ," ಎಂದು ದೂರಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications